ಸಮಗ್ರ ದಾಸಸಾಹಿತ್ಯ ಸಂಪುಟಗಳ ಒಳ-ಹೊರಗು.
Keywords:
ದಾಸಸಾಹಿತ್ಯ, ಪ್ರಕಟಣೆ, ಆಧುನಿಕ ಸಂಪಾದನಾ ವಿಧಾನAbstract
ದಾಸಸಾಹಿತ್ಯದ ಪ್ರಕಟಣೆಯ ಸುವರ್ಣಯುಗವೆಂದರೆ ಅದು ಪಾವಂಜೆ ಮತ್ತು ಗೊರೇಬಾಳರ ಕಾಲದಲ್ಲಾದ ಪ್ರಕಟಣೆಗಳು. ಆದರೆ ಈ ಕಾಲದಲ್ಲಿ ಕೇವಲ ದಾಸಸಾಹಿತ್ಯದ ಸಂಪಾದನೆಯನ್ನಷ್ಟೇ ಮುಖ್ಯವಾಗಿರಿಸಿಕೊಂಡು ಸಂಪಾದನೆಗಳು ನಡೆದವು. ಕಾಲಾ ನಂತರದ ದಾಸಸಾಹಿತ್ಯದ ಸಂಪಾದನೆ ಆಧುನಿಕ ಸಂಪಾದನಾ ವಿಧಾನದನ್ವಯ ಜರುಗಲಾರಂಭಿಸಿ ಅನೇಕ ಕೃತಿಗಳು ಸಂಪಾದನೆಯಾಗಿ ಪ್ರಕಟಣೆಗೊಂಡವು. ಇವುಗಳಲ್ಲಿ ಕೆಲವು ಕೃತಿಗಳನ್ನು ಹೊರತುಪಡಿಸಿ ಉಳಿದೆಲ್ಲ ಕೃತಿಗಳು ವೈಯಕ್ತಿಕ ಪ್ರಕಟಣೆಗಳಾಗಿದ್ದವು. ಹಾಗಾಗಿ ಸರ್ಕಾರಕ್ಕೆ ದಾಸಸಾಹಿತ್ಯದ ಸಂಪಾದನಾ ಕೃತಿಗಳನ್ನು ಪ್ರಕಟಿಸುವ ಒಂದು ಯೋಜನೆಯನ್ನು ರೂಪಿಸಬೇಕೆಂದು ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಕೂಗು. ಇಂತಹ ಕೋರಿಕೆಯ ಫಲವಾಗಿ 2003ರಲ್ಲಿ ಕರ್ನಾಟಕ ಸರ್ಕಾರವು ಸಮಗ್ರ ದಾಸಸಾಹಿತ್ಯವನ್ನು ಪ್ರಕಟಿಸುವ ಒಂದು ಯೋಜನೆಯನ್ನು ರೂಪಿಸಿತು. ಅದರ ಫಲವೇ ಈ 35 ಸಂಪುಟಗಳ 50 ಕೃತಿಗಳು. ಈ ಯೋಜನೆಯಲ್ಲಿ ಮೂಡಿಬಂದ ಕೃತಿಗಳ ಆಂತರಿಕ ಮತ್ತು ಬಾಹ್ಯವಾಗಿರುವ ಕೆಲವು ವಿಚಾರಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.