ಕನ್ನಡ ಸಾಹಿತ್ಯದಲ್ಲಿ ರೈತ.
Keywords:
ರೈತ, ಕೃಷಿ, ಆತ್ಮಹತ್ಯೆ, ಭೂಮಿ, ಅಸಹಾಯಕತೆ, ಜಮೀನ್ದಾರಿ, ಬೆವರುAbstract
ಭಾರತ ಕೃಷಿ ಕೇಂದ್ರಿತವಾದ ದೇಶ. ಕೃಷಿ ಅವಲಂಬಿತ ಜೀವನ ಕಲೆಯಾಗಿ, ಕಾದಂಬರಿಯಾಗಿ, ಕವನವಾಗಿ, ಲಾವಣಿಯಾಗಿ, ಇನ್ನೂ ಅನೇಕ ಸಾಹಿತ್ಯ ರೂಪಗಳನ್ನು ಪಡೆದುಕೊಂಡು ಬಂದಿದೆ. ರೈತ ಎಲ್ಲರ ಬದುಕಿನ ಭಾಗ. ಸಾಹಿತ್ಯದ ನಿರಂತರ ಸೆಲೆ ಇವನು. ರೈತನ ಅಸ್ತಿತ್ವವಿರದೇ ಭೂಮಿಗೆ ಅಸ್ತಿತ್ವವಿಲ್ಲ. ರೈತನಿಗೆ ಮಿಡಿಯದ, ಸ್ಪಂದಿಸದೇ ಹೋದರೆ ಸಾಹಿತ್ಯಕ್ಕೂ ಬೆಲೆ ನೆಲೆ ಇಲ್ಲ.
ಭಾರತೀಯ ಸಾಹಿತ್ಯ, ಕನ್ನಡ ಸಾಹಿತ್ಯ ನಿರಂತರವಾಗಿ ನೇಗಿಲಯೋಗಿಯನ್ನು ಚಿತ್ರಿಸುತ್ತ ಬಂದಿದೆ. ಸಾಹಿತ್ಯದಲ್ಲಿ ರೈತನ ಭಾವ, ಕಷ್ಟ, ನೋವು, ಸಮಸ್ಯೆ ಪರಿಹಾರಗಳನ್ನು ಕಾಣುತ್ತೇವೆ. ಕುವೆಂಪು ಅವರು ‘ನೇಗಿಲ ಕುಲದೊಳಗಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಎನ್ನುವ ಮೂಲಕ ರೈತ ಧರ್ಮ ಸಾರುತ್ತಿದ್ದಾರೆ. ‘ಉಳುವಾ ಯೋಗಿಯ ನೋಡಲ್ಲಿ’ ಎಂದು ರಾಷ್ಟ್ರಕವಿ ಕುವೆಂಪು ತೋರಿಸಿದ ರೈತರನ್ನು ಅನೇಕ ಕವಿಗಳು ತಮ್ಮದೇ ಆದ ಅನುಭವದೊಂದಿಗೆ ರೈತರ ಬದುಕಿನ ಸತ್ಯದ ದರ್ಶನವನ್ನು ಮೂಡಿಸಿದ್ದಾರೆ.