ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಕೀರ್ತನೆಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಒಂದು ಮರುಚಿಂತನೆ.

Authors

  • RADHA NADIG

Keywords:

ದಾಸ ಸಾಹಿತ್ಯ, ಪಾರ್ಥಸಾರಥಿ, ಧರ್ಮ, ಸಾಮಾಜಿಕತೆ, ಕೀರ್ತನೆ

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಹತ್ತನೆ ಶತಮಾನದ ಚಂಪೂವಿನಿಂದ ಪ್ರಾರಂಭವಾಗಿ, ಹನ್ನೆರಡನೇ ಶತಮಾನದ ವಚನ ಚಳುವಳಿ, ಮುಂದುವರೆದು ಕಂದ, ಷಟ್ಪದಿ, ತ್ರಿಪದಿ, ಸಾಂಗತ್ಯ, ರಗಳೆಗಳಂತೆಯೇ ಕೀರ್ತನ ಸಾಹಿತ್ಯವೂ ಹುಲುಸಾಗಿ ಬೆಳೆದು ನಿಂತಿದೆ. ಇದು ಹದಿನೈದು-ಹದಿನಾರನೇ ಶತಮಾನಕ್ಕೆ ಸೀಮಿತಗೊಳ್ಳದೆ; ಇಂದಿಗೂ ರಚನೆಯ ರೂಪದಲ್ಲಿ ಪ್ರಚಲಿತದಲ್ಲಿರುವುದು ಸಂತಸದ ವಿಚಾರ. ಪ್ರಸ್ತುತ “ಡಾ.ಅರಳುಮಲ್ಲಿಗೆ ಪಾರ್ಥಸಾರಥಿಯವರ ಕೀರ್ತನೆಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಒಂದು ಮರುಚಿಂತನೆ” ಎಂಬ ಶೀರ್ಷಿಕೆಯಲ್ಲಿ ಅವರು ರಚಿಸಿರುವ ಕೀರ್ತನೆಗಳನ್ನು ದೃಷ್ಠಿಕೋನದಲ್ಲಿರಿಸಿಕೊಂಡು ಇಲ್ಲಿ ವ್ಯಕ್ತವಾಗಿರುವ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಅಂಶಗಳನ್ನು ಶೋಧಿಸಲಾಗಿದೆ. ಆಯ್ದ ಕೆಲವು ಮುಖ್ಯಾಂಶಗಳನ್ನು ಈ ಮುಂದಿನಂತೆ ಗುರುತಿಸಲಾಗಿದೆ.

ದಾಸ ಸಾಹಿತ್ಯದ ಹಿನ್ನೆಲೆ, ಹರಿದಾಸರು ಭಾಗವತ ಮತ್ತು ಮಾಧ್ವ ಮತತತ್ವಗಳ ಪ್ರಚಾರ, ದ್ವೈತ ಸಿದ್ಧಾಂತ, ನರಹರಿತೀರ್ಥ, ಶ್ರೀಪಾದರಾಜರಿಂದ ಮರುಹುಟ್ಟು, ವಾದಿರಾಜರು, ವ್ಯಾಸರಾಯರು, ಪುರಂದರದಾಸರು, ಕನಕದಾಸರು, ವಿಜಯದಾಸರು ಮತ್ತು ಜಗನ್ನಾಥದಾಸರವರೆಗೆ ಬೆಳೆದುಬಂದ ಕ್ರಮವನ್ನು ಪರಿಚಯಿಸುತ್ತಾ ಇಂದಿನ ವೆಂಕಣ್ಣದಾಸರು ಹಾಗೂ ವೇಣುಗೋಪಾಲದಾಸರನ್ನು ಸ್ಮರಿಸುತ್ತಾ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಯವರ ಬಗ್ಗೆ ಪರಿಚಯಿಸಲಾಗಿದೆ.

ಭಕ್ತಿ-ಭಾವ, ಭಾಗವತ ಹಿನ್ನೆಲೆ, ದಾಸಭಾವ, ಸಾರ್ವಕಾಲಿಕ ಸತ್ಯ, ಸಮರ್ಪಣಾ ಭಾವ, ಮಾನವ ಬದುಕಿನ ಉದಾರತೆ, ವಿಷ್ಣುವಿನ ಅವತಾರಗಳು ಮತ್ತು ರಾಕ್ಷಸರ ಸಂಹಾರದ ಕತೆಗಳು, ಪುರಾಣ ಮತ್ತು ಋಷಿ ಮುನಿಗಳ ಕತೆಗಳನ್ನು ತಮ್ಮ ಕೀರ್ತನೆಗಳಲ್ಲಿ ತಿಳಿಸುತ್ತಾ ಜೀವನದ ನಶ್ವರತೆಯನ್ನು ಹೃದ್ಯಂಗಮವಾಗಿ ತಿಳಿಸಿದ್ದಾರೆ. ಯುಗಗಳ ಪರಿಕಲ್ಪನೆ, ಗುರು-ಶಿಷ್ಯ ಸಂಬಂಧ, ಹಸಿವು, ಅರಿಷಡ್ವರ್ಗಗಳು, ವೇದ-ಉಪನಿಷತ್ತುಗಳು, ಪೂಜೆ-ನೇಮ, ಜಪ-ತಪ, ಸ್ವರ್ಗ-ನರಕ, ಇಹ-ಪರಗಳಬಗ್ಗೆ ತಮ್ಮ ಕೀರ್ತನೆಗಳಲ್ಲಿ ಅರ್ಥಪೂರ್ಣವಾಗಿ ತಿಳಿಸಿದ್ದಾರೆ.

Downloads

Published

05.09.2023

How to Cite

RADHA NADIG. (2023). ಡಾ. ಅರಳುಮಲ್ಲಿಗೆ ಪಾರ್ಥಸಾರಥಿಯವರ ಕೀರ್ತನೆಗಳಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಕಳಕಳಿಯ ಒಂದು ಮರುಚಿಂತನೆ. AKSHARASURYA, 2(10), 204 to 213. Retrieved from http://aksharasurya.com/index.php/latest/article/view/241

Issue

Section

ಪ್ರಬಂಧ. | ESSAY.