ಚಂದ್ರಹಾಸನ ಕಥೆಯಲ್ಲಿನ ಭಕ್ತಿ ಮತ್ತು ಕರುಣಾಭಾವ.
Keywords:
ಭಕ್ತಿ, ಯಜ್ಞ, ಕರುಣೆ, ದುಷ್ಟ, ರಾಜ್ಯ, ದೈವAbstract
ಚಂದ್ರಹಾಸನ ಕಥೆ ಕರುಣೆ ಹಾಗೂ ಭಕ್ತಿ ಪ್ರಧಾನ ರಸವನ್ನೊಳಗೊಂಡಿದೆ. ಜೈಮಿನಿ ಭಾರತದಲ್ಲಿ ಲಕ್ಷ್ಮೀಶನು ತನ್ನ ಕೌಶಲ್ಯವನ್ನು ಅನುಸರಿಸಿ ಚಂದ್ರದತ್ತನ ರಾಜ್ಯದತ್ತ ಕುದುರೆಯನ್ನು ಹೊರಳಿಸುವ ಪೂರ್ವದಲ್ಲಿ ಮಾಡಿದ ಸೃಷ್ಟಿ ವರ್ಣನೆಯಲ್ಲಿ ಬರಲಿರುವ ಕಥೆಯನ್ನು, ಅದನ್ನು ದಾಟುವುದು ಸಾಧ್ಯ ಎಂಬ ಸೂಚನೆಯನ್ನು ಕೊಡುತ್ತಾನೆ. ಚಂದ್ರಹಾಸನ ಕಥೆಯ ವಿಶೇಷತೆಯೆಂದರೆ ಇದರ ಪೂರ್ವದ ಕಥೆಗಳಂತೆಯೆ ಈ ಕಥಾನಕದೊಳಗಿನ ದೇಶ, ಪಾತ್ರಗಳ ಹೆಸರುಗಳಿಂದ ಸೂಚಿತವಾಗಿರುವ ನೀತಿ. ಇದು ಭಾಗವತ ಸಂಪ್ರದಾಯದ ಎಲ್ಲಾ ಕಥೆಗಳಿಗೂ ಅನ್ವಯಿಸುವುದು. ಲಕ್ಷ್ಮೀಶನು ಜೈಮಿನಿ ಭಾರತವು ಚಂದ್ರವಂಶದ ರಾಜರನ್ನು ಕುರಿತು ಬರೆದುದಾಗಿದೆ. ಈ ಕಥೆ ಅಶ್ವಮೇಧಕ್ಕೆ ಸಂಬಂಧಿಸಿದ್ದಾಗಿದೆ ಮತ್ತು ಬಬ್ರುವಾಹನ ಕಥಾವ್ಯಾಜ್ಯದಿಂದಲೂ ರಾಮಚಂದ್ರನ ಕಥೆ ಸೇರಿಕೊಂಡಿದೆ. ದುಷ್ಟಬುದ್ದಿಯು ಚಂದ್ರಹಾಸನ ಮರಣಕ್ಕೆ ಪ್ರಯತ್ನಿಸುವುದು ಮತ್ತು ದೈವವಿಲಾಸವನ್ನು ಉತ್ತಮವಾಗಿ ಹೇಳುತ್ತದೆ.