ವೈದ್ಯಕೀಯ ಪದವಿಗಾಗಿ ಹೋರಾಡಿದ ಮೊದಲ ಮಹಿಳೆ ಕದಂಬಿನಿ ಗಂಗೂಲಿ.
Keywords:
ಈಸ್ಟ್ ಇಂಡಿಯಾ ಕಂಪನಿ, ಮಹಿಳಾ ಹಕ್ಕುಗಳು, ವರ್ಣಾಶ್ರಮ, ಸತಿಸಹಗಮನ ಪದ್ದತಿ, ಸಾಮಾಜಿಕ ಚಳುವಳಿ, ವಿಮೋಚನೆ, ಸಬಲೀಕರಣAbstract
ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಪುರುಷ ಪ್ರಧಾನ ಸಮಾಜವನ್ನು ಮೆಟ್ಟು ನಿಂತು ಪದವಿ ಪಡೆದ ಭಾರತದ ಮೊದಲ ಇಬ್ಬರು ಮಹಿಳಾ ಪದವೀಧರರಲ್ಲಿ ಒಬ್ಬರು ಕದಂಬಿನಿ ಗಂಗೂಲಿ. ದಕ್ಷಿಣ ಏಷ್ಯಾದ ಮೊದಲ ಮಹಿಳಾ ವೈದ್ಯೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕದಂಬಿನಿ ಗಂಗೂಲಿ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಮೊದಲು ಢಾಕಾದ ಬ್ರಹ್ಮೋ ಈಡನ್ ಸ್ತ್ರೀ ಶಾಲೆಯಲ್ಲಿ ಮತ್ತು ನಂತರ ಕಲ್ಕತ್ತದ ಬ್ಯಾಲಿಗಂಜ್ ನ ಹಿಂದೂ ಮಹಿಳಾ ವಿಶ್ವವಿದ್ಯಾಲಯದಲ್ಲಿ, ಎರಡನೇ ಶಾಲೆಯನ್ನು 1870ರಲ್ಲಿ ಬಾಂಗಾ ಮಹಿಳಾ ವಿದ್ಯಾಲಯ ಎಂದು ಮರು ನಾಮಕರಣ ಮಾಡಲಾಯಿತು. ಎರಡು ವರ್ಷಗಳ ನಂತರ ಬೆಥೂನ್ ಶಾಲೆಯೊಂದಿಗೆ ವಿಲೀನಗೊಂಡಿತು. ತನ್ನ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ (CU) ಪ್ರವೇಶ ಪರೀಕ್ಷೆಗೆ ಹಾಜರಾಗಲು ಬಯಸಿದ್ದರು. ಆದರೆ ವಿಶ್ವವಿದ್ಯಾಲಯವು ಇನ್ನೂ ಮಹಿಳಾ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿರಲಿಲ್ಲ. ಕದಂಬಿನಿ ಅವರು ವೈದ್ಯೆಯಾಗಿ ತಮ್ಮ ಕೆಲಸವನ್ನು ಸಾಮಾಜಿಕ ಲೋಕೋಪಕಾರ ಮತ್ತು ರಾಜಕೀಯ ಚಟುವಟಿಕೆಗಳೊಂದಿಗೆ ಸಂಯೋಜಿಸಿದರು. ಸಂಪ್ರದಾಯವಾದಿ ಸಮಾಜದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಸಕ್ರಿಯವಾಗಿ ಹೋರಾಟ ನಡೆಸಿದರು. ಮಹಿಳೆಯರ ಹಕ್ಕುಗಳಿಗಾಗಿ ಪ್ರಚಾರ ಮಾಡಿದರು. ಅವರು 1889 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ನ ಐದನೇ ಅಧಿವೇಶನದ ಆರು ಮಹಿಳಾ ಪ್ರತಿನಿಧಿಗಳಲ್ಲಿ ಒಬ್ಬರಾಗಿದ್ದರು. ಒಟ್ಟಾರೆ ಮಹಿಳೆಯರ ವಿಮೋಚನೆ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಅವರಿಗಿರುವ ನಿರ್ಬಂಧಗಳ ವಿರುದ್ಧ ಹೋರಾಟ ನಡೆಸಿದ ಮಹಾನ್ ಮಹಿಳಾ ಚಿಂತಕಿಯಾಗಿದ್ದಾರೆ.