ಆಧುನಿಕ ಕನ್ನಡ ಸಾಹಿತ್ಯ: ಸಂಶೋಧನೆಯ ಸವಾಲುಗಳು.
Keywords:
ಸಂಶೋಧನೆ, ಸಂಶೋಧಕ, ಮಾರ್ಗದರ್ಶಕ, ಕೊರತೆ, ಪ್ರೋತ್ಸಾಹ, ಅವಕಾಶ, ವ್ಯವಸ್ಥೆAbstract
ಮನುಷ್ಯ ಸಂಘ ಜೀವಿ. ಮನುಷ್ಯ ಸಮಾಜದ ನಿಕಟ ಸಂಪರ್ಕವಿಲ್ಲದೆ ಬಾಳಿ ಬದುಕಲಾರ. ಮನುಷ್ಯ ತನ್ನ ಸುಖೀ ಜೀವನಕ್ಕಾಗಿ ಹಲವಾರು ಸಂಶೋಧನೆಗಳನ್ನು ಮಾಡಿದ್ದಾನೆ. ಮನುಷ್ಯ ತನ್ನ ಮಿತಿಮೀರಿದ ಸಂಶೋಧನೆಗಳಿಂದ ಅವನತಿಯ ಹಾದಿಯನ್ನು ತಲುಪಿದ್ದಾನೆ. ಮಿತಿ ಮೀರಿದ ಸಂಶೋಧನೆಗಳಿಂದ ಸಾಕಷ್ಟು ರೋಗ, ರುಜಿನಗಳು ಹುಟ್ಟಿಕೊಂಡಿವೆ. ಪ್ರಪಂಚದ ಸಾಕಷ್ಟು ಕೃಷಿ ಭೂಮಿ ಮರುಭೂಮಿಯಾಗಿ ಪರಿವರ್ತನೆಯಾಗಿದೆ. ಪ್ರಪಂಚದ ಹಲವಾರು ನದಿಗಳು ತಮ್ಮ ಹರಿಯುವಿಕೆಯನ್ನು ನಿಲ್ಲಿಸಿವೆ. ಭಾರತದಂತಹ ಅಭಿವೃದ್ದಿಶೀಲ ದೇಶದಲ್ಲಿ ನಿಜವಾದ ಸಂಶೋಧನೆಗಳಿಗೆ ಪ್ರೋತ್ಸಾಹವಿಲ್ಲ. ಪಿಹೆಚ್.ಡಿ. ಸಂಶೋಧಕರಿಗೆ ಮೀಸಲಾತಿ, ಸ್ವಜನಪಕ್ಷಪಾತ, ಭ್ರಷ್ಟಾಚಾರ ಇತ್ಯಾದಿ ಕಾರಣಗಳಿಂದ ಮಾರ್ಗದರ್ಶಕರು ಲಬ್ಯವಾಗುವುದಿಲ್ಲ. ಪ್ರತಿಭಾವಂತ ಸಂಶೋಧಕರಿಗೆ ಅವಕಾಶ ಸಿಗಬೇಕು. ಅಂತಹ ಸಂಶೋಧಕರು ಕೈಗೊಳ್ಳುವ ಸಂಶೋಧನೆಗಳಿಂದ ರಾಷ್ಟ್ರ ಪ್ರಗತಿಯ ಪಥದತ್ತ ಸಾಗಲಿ ಎಂಬುದು ಪ್ರಸ್ತುತ ಲೇಖನದ ಆಶಯ.