ಕುರ್‌ಆನ್‌ನ ಕನ್ನಡ ಅನುವಾದಗಳು: ವಿಕಸನೀಯ ಇತಿಹಾಸ

Authors

  • ಸೈಯದ್ ಮುಯೆನ್

Abstract

ಈ ಲೇಖನವು 1954 ರಿಂದ2020 ರವರೆಗಿನ ಕುರ್‌ಆನ್‌ನ ಕನ್ನಡ ಅನುವಾದಗಳ ವಿಕಸನೀಯ ಇತಿಹಾಸವನ್ನು ಅನುಸಂಧಾನ, ಅನುವಾದದ ಕಾರಣ ಮತ್ತು ಉದ್ದೇಶಿತ ಬಳಕೆಗಳ ಮೇಲೆ ನಿರ್ದಿಷ್ಟವಾಗಿ ಗಮನ ನೀಡಲಾಗಿದೆ. 7ನೇ ಶತಮಾನಕ್ಕೆ ಕರ್ನಾಟಕಕ್ಕೆ ಇಸ್ಲಾಂ ಧರ್ಮದ ಆಗಮನವಾದರು ಕುರ್‌ಆನ್‌ನ ಕನ್ನಡ ಅನುವಾದವು 20ನೇ ಶತಮಾನದ ಮಧ್ಯದಲ್ಲಾದುದು ಆಶ್ಚರ್ಯವೇ ಸರಿ. ಸುಮಾರು 1300 ವರ್ಷಗಳ ಅಗಾಧ ಅಂತರವನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕವಾಗಿದೆ. ಈ ಸುದೀರ್ಘ ಅವಧಿಯಲ್ಲಿ ಇಸ್ಲಾಂ ಧರ್ಮ ಕರ್ನಾಟಕದಲ್ಲಿ ತನ್ನ ಅಸ್ತಿತ್ವ ಕಂಡುಕೊಂಡಿದ್ದರು, ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಕನ್ನಡ ಭಾಷೆಗೆ ಅನುವಾದಿಸದೆ ಇದ್ದುದರ ಕಾರಣ ಕಂಡುಕೊಳ್ಳುವುದು ಅವಶ್ಯಕವಾಗಿದೆ. ಉತ್ತರ ಭಾರತಕ್ಕಿಂತ ಮೊದಲು ದಕ್ಷಿಣ ಭಾರತಕ್ಕೆ ಸಮುದ್ರ ಮಾರ್ಗವಾಗಿ ಇಸ್ಲಾಂ ಧರ್ಮ ಪ್ರವೇಶಿಸಿದರು, ಕುರ್‌ಆನ್‌ನ ಅನುವಾದ ಕಾರ್ಯವು 19ನೇ ಶತಮಾನದ ಆದಿಯಲ್ಲಿ ಅಂದರೆ 1874ರಲ್ಲಿ ಮೊದಲ ತಮಿಳು ಭಾಷೆಯ ಕುರ್‌ಆನ್ ಅನುವಾದಗೊಂಡಿರುವುದು ಗಮನಾರ್ಹವಾಗಿದೆ. ಮಲಯಾಳ ಭಾಷೆಯಲ್ಲಿ 1855ರಲ್ಲಿ ಪ್ರಾರಂಭವಾದ ಕುರ್‌ಆನ್‌ನ ಅನುವಾದವು 15 ವರ್ಷಗಳ ನಂತರ ಪೂರ್ಣಗೊಂಡಿತು. ಆದರೆ ಕುರ್‌ಆನ್‌ನ ಅನುವಾದವು ಕನ್ನಡ ಭಾಷೆಯಲ್ಲಿ ಇತರ ದ್ರಾವಿಡ ಭಾಷೆಗಳಿಗೆ ಹೋಲಿಸಿಕೊಂಡಾಗ ಸುಮಾರು 100 ವರ್ಷಗಳ ಅಂತರವಿರುವುದನ್ನು ಗಮನಿಸಬಹುದಾಗಿದೆ.

1950ರ ನಂತರ ಪ್ರಕಟವಾದ ಮೊದಲ ಕನ್ನಡ ಅನುವಾದಿತ ಕುರ್‌ಆನ್‌ನ ನಂತರ ಸುಮಾರು 70 ವರ್ಷಗಳ ಅವಧಿಯಲ್ಲಿ 15ಕ್ಕೂ ಹೆಚ್ಚು ಕನ್ನಡ ಅನುವಾದಿತ ಕುರ್‌ಆನ್‌ಗಳು ಪ್ರಕಟಗೊಂಡಿವೆ, ಇದಕ್ಕೆ ಕಾರಣ ಇಸ್ಲಾಂ ಧರ್ಮದಲ್ಲಿರುವ ವಿವಿಧ ಪಂಥಗಳು, ಚಳವಳಿಗಳು ಮತ್ತು ಸಂಘಟನೆಗಳು ತಮ್ಮದೇ ಆದ ಅನುವಾದವನ್ನು ಹೊಂದಲು ಪ್ರಯತ್ನಿಸಿದ ಉತ್ಸಾಹವನ್ನು ಸೂಚಿಸುತ್ತದೆ. ಕನ್ನಡ ಕುರ್‌ಆನ್ ಅನುವಾದವು ಸಾಂಪ್ರದಾಯಿಕ ಮತ್ತು ಭಿನ್ನಾಭಿಪ್ರಾಯ ಸಂಸ್ಥೆಗಳ ನಡುವಿನ ಅಧಿಕಾರದ ಹೋರಾಟದ ಸ್ಥಳವಾಗಿರುವುದನ್ನು ಸೂಚಿಸುತ್ತದೆ. ಅನುವಾದದಲ್ಲಿ ಹಲವು ಪ್ರಕಾರಗಳುಂಟು, ಇಸ್ಲಾಂ ಧಾರ್ಮಿಕ ಪರಿಣತರ ಪ್ರಕಾರ ಕುರ್‌ಆನ್‌ನ ಅಕ್ಷರಶಃ ಅನುವಾದಕ್ಕಿಂತ ಭಾವಾನುವಾದ ಉತ್ತಮವೆಂದು ಸಮ್ಮತಿಸಿದ್ದಾರೆ. ಆದರೆ ವಿವಿಧ ಪಂಥಗಳ, ಹೊಸ ವಿಚಾರಧಾರೆಯ ಅನುವಾದಕರು ವೈವಿಧ್ಯಪೂರ್ಣದ ಅನುವಾದಗಳನ್ನು ಮಾಡುವ ಬದಲು ಸಂಪ್ರದಾಯಬದ್ಧ ಅನುವಾದದ ಪ್ರಕಾರಗಳನ್ನೇ ಅನುಸರಿಸಿದ್ದಾರೆ. ಪ್ರತಿ ಹೊಸ ಅನುವಾದವು ತನಗಿಂತ ಹಿಂದೆ ಬಂದಂತಹ ಕುರ್‌ಆನ್‌ಗಳಲ್ಲಿನ ಅಸಮರ್ಪಕತೆಯ ಪೂರ್ಣತ್ವವೆಂಬಂತೆ ತಮ್ಮಲ್ಲಿನ ಹೊಸ ಅನುವಾದದ ಸಾಧ್ಯತೆಗಳನ್ನು ಎತ್ತಿತೋರಿಸಿದ್ದಾರೆ. ಹೀಗೆ ಪ್ರತಿಯೊಂದು ಅನುವಾದವು ಹೊಸ ಹೊಸ ಸಾಧ್ಯತೆಗಳೊಂದಿಗೆ, ಹೊಸ ಆಯಾಮಗಳೊಂದಿಗೆ ಬರುತ್ತಿರುವುದನ್ನು ಗಮನಿಸಬಹುದು.

Downloads

Published

05.12.2022

How to Cite

ಸೈಯದ್ ಮುಯೆನ್. (2022). ಕುರ್‌ಆನ್‌ನ ಕನ್ನಡ ಅನುವಾದಗಳು: ವಿಕಸನೀಯ ಇತಿಹಾಸ. AKSHARASURYA, 1(03), 56 to 64. Retrieved from http://aksharasurya.com/index.php/latest/article/view/23

Issue

Section

Article