ಮೊದಲನೆಯ ನಾಗವರ್ಮನ ‘ಕರ್ನಾಟಕ ಕಾದಂಬರಿ’ ಕಥನಕ್ರಮ.
Keywords:
ಕಾದಂಬರಿ, ಚಂದ್ರಪೀಡ, ಮಹಾಶ್ವೇತೆ, ವೈಶಂಪಾಯನ, ಕಪಿಂಜಲ, ಪುಂಡರೀಕ, ಗಿಳಿAbstract
ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಸಾಹಿತ್ಯ ರಚನೆ ಮಾಡಿದ ಕವಿಗಳಲ್ಲಿ ಪ್ರಮುಖರಾದವರು ಮೊದಲನೆಯ ನಾಗವರ್ಮ. ಸಾಹಿತ್ಯ ಚರಿತ್ರೆಯ ಯಾವ ಕಾಲಘಟ್ಟದಲ್ಲಿಯೂ ಪ್ರಣಯ ಪ್ರಸಂಗಳಿಗೆ ಯಾವುದೇ ಕೊರೆತೆಯಿಲ್ಲ. ಕರ್ನಾಟಕ ಕಾದಂಬರಿಯಲ್ಲಿ ಬರುವ ಕಾದಂಬರಿ, ಚಂದ್ರಪೀಡ, ಮಹಾಶ್ವೇತೆ, ವೈಶಂಪಾಯನ, ಕಪಿಂಜಲ, ಪುಂಡರೀಕ ಇಂತಹ ಪ್ರಮುಖ ಪಾತ್ರಗಳನ್ನೊಳಗೊಂಡಿರುವ ಕೃತಿ ಇದಾಗಿದೆ. ಇದರ ಕಥಾಸಂವಿಧಾನ ಅತ್ಯಂತ ಜಟಿಲವು ದಿಗ್ಭ್ರಾತವು ಆಗಿದ್ದು, ಕಥೆಯೊಳಗೆ ಕಥೆ ಸೇರಿಕೊಂಡು ಹಲವಾರು ಒಳಪದರುಗಳು ನಿರ್ಮಿತವಾಗಿರುವುದರ ಜೊತೆಗೆ ಶಾಪ, ಪ್ರತಿಶಾಪ, ಪುನರ್‌ಜನ್ಮಗಳ ಗೊಂದಲಗಳಿವೆ. ಮೂರು ಜನ್ಮಗಳ ಕಥೆಯನ್ನು ಕವಿ ಒಂದು ಸಂಕೀರ್ಣ ವಿನ್ಯಾಸದಲ್ಲಿ ನಿರೂಪಿಸಿದ್ದಾರೆ. ಇದರಲ್ಲಿ ಸಂಕೀರ್ಣವಾದ ತಂತ್ರಗಳನ್ನು ಬಳಸಿಕೊಳ್ಳುತ್ತಾ ಹೋಗುತ್ತಾನೆ. ಇದರಲ್ಲಿನ ಪಾತ್ರಗಳೆಲ್ಲವು ಕಥೆಗಳನ್ನು ಹೇಳುತ್ತಾ ಹೋಗುತ್ತವೆ. ಗಿಳಿಕಥೆ, ಜಾಬಾಲಿಋಷಿ, ಮತ್ತೊಂದು ಕಡೆ ಮಹಾಶ್ವೇತೆ, ಇನ್ನೊಂದು ಕಡೆ ಕಪಿಂಜಲ ಕಥೆಗಳನ್ನು ಹೇಳುತ್ತಿರುತ್ತಾರೆ. ಇದೊಂದು ಕಾವ್ಯ ತಂತ್ರವನ್ನು ರೂಪಿಸಿದ ಬಗೆಯಾಗಿದೆ. ಹಿಮ್ಮುಖ ಚಲನೆಯಲ್ಲಿ ಬಂದು ಅವುಗಳ ನಡುವಿನ ಸಂಬಂಧವನ್ನು ಜ್ಞಾಪಿಸಿಕೊಳ್ಳುವ ಬಗೆಯೇ ಈ ಕಾವ್ಯದ ವಿಷೇಶವಾಗಿದೆ. ಓದುಗರಿಗೆ ಹೊಸ ಆಲೋಚನೆ ಮತ್ತು ಆನಂದವನ್ನು ಈ ಕೃತಿ ಕೊಡುತ್ತದೆ ಎಂಬ ಭರವಸೆಯ ಹಿನ್ನಲೆಯಲ್ಲಿ ಅವಲೋಕಿಸಲಾಗಿದೆ.