ಮಹಿಳೆ ಮತ್ತು ಜಾಹಿರಾತು.
Keywords:
ಮಹಿಳೆ ಮತ್ತು ಮಾಧ್ಯಮ, ಸ್ತ್ರೀ ಪ್ರತಿನಿಧೀಕರಣ, ಸಾಮಾಜಿಕ ಬದ್ಧತೆ, ಮಾಧ್ಯಮ ಲೋಕದ ತಲ್ಲಣಗಳು,, ದೇಹ ಮೀಮಾಂಸೆAbstract
ನಮ್ಮ ಪೂರ್ವಿಕರು ಈ ಜಗತ್ತಿನ ಬಹುತೇಕ ಕೊಡುಗೆಗಳನ್ನು ಹೆಣ್ಣಿಗೆ ಹೋಲಿಸಿ ಪೂಜ್ಯ ಸ್ಥಾನವನ್ನು ನೀಡಿ ಗೌರವಿಸಿದ್ದರು. ಆರ್ಯರು ಭಾರತಕ್ಕೆ ಬಂದ ನಂತರ ಅವಳ ಜೀವನ ಕ್ರಮದಲ್ಲಿ ಬದಲಾವಣೆಗಳು ಕಂಡು ಬಂದುವು. ಇಂದು ಅಂದರೆ ಆಧುನಿಕ ಯುಗದಲ್ಲಿಯೂ ಅವಳು ಎಲ್ಲಾ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಬೆಳೆದರು ಶೋಷಣೆಯಿಂದ ಹೊರತಾಗಿಲ್ಲ. ಪ್ರತಿ ಭಾಷಣದಲ್ಲೂ ಲೇಖನದಲ್ಲೂBehind every great man there is an women ಎನ್ನುವ ನಾವೆಲ್ಲಾ ಮೂಲಭೂತ ಹಕ್ಕು ಅವಕಾಶಗಳ ಕಡೆಗೆ ಗಮನ ಹರಿಸಿದಾಗ ಇದು ಬರೀ ವಾಕ್ಯವಾಗಿಯೇ ಉಳಿಯುತ್ತದೆ. ಇದಕ್ಕೆ ಅಪವಾದವಾಗಿ ಶರಣ ಸಂಸ್ಕೃತಿ ಹೆಣ್ಣನ್ನು ಗೌರವದಿಂದ ಕಂಡಿದ್ದು ಹೆಮ್ಮೆಯ ವಿಷಯವಾಗಿದೆ. ಮುದ್ರಣ ಮಾಧ್ಯಮದಲ್ಲಿನ ವರ್ಗೀಕೃತ ಜಾಹಿರಾತುಗಳೂ ಸಹ ಅದರಲ್ಲೂ ಮಹಿಳೆಯನ್ನು ನೋಡುವ ಕ್ರಮವನ್ನು ಈ ರೀತಿ ನೋಡಬಹುದು. ‘ಕೆಲಸಕ್ಕೆ ಮಹಿಳೆಯೊಬ್ಬಳು ಬೇಕಾಗಿದ್ದಾಳೆ, ವಯಸ್ಸು 25 ಮೀರಿರಬಾರದು. ಮನೆಗೆಲಸದಲ್ಲಿ ಪರಿಣತಿ ಇರಬೇಕು. ಬೇಕಾಗಿದ್ದಾಳೆ; ನೋಡಲು ಸುಂದರವಾಗಿರಬೇಕು. ವಯಸ್ಸು 30 ಮೀರಿರಬಾರದು ಎನ್ನುವಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿನ ವಾರ್ತಾವಾಚಕಿಯರ ಮತ್ತು ನಿರೂಪಕಿಯರ ಅರ್ಹತೆಗಳೆಂದರೆ ಅದರಲ್ಲೂ ಮೊದಲ ಆದ್ಯತೆ ನೋಡಲು ಆಕರ್ಷಕವಾಗಿರಬೇಕು, ವಯಸ್ಸು 25 ಮೀರಿರಬಾರದು, ಆ ಮೇಲೆ ಉಳಿದ ಅರ್ಹತೆಗಳು. ಜೊತೆಗೆ ಪುರುಷರು ಬಳಸುವ ಕ್ಷೌರ ಸಾಧನ, ಕಾಂಡೊಮ್, ಕಾಮ ಉದ್ರೇಕಿತ ಔಷಧಿಗಳು, ಸೋಪಿನಿಂದ ಹಿಡಿದು ಕಾರಿನ ಜಾಹಿರಾತಿಗೂ ಮಹಿಳೆಯ ದೇಹವನ್ನು ಸಂಯೋಜಿಸುವ ಮನೋಭಾವವನ್ನು ನೋಡಿದರೆ ಇವುಗಳ ಹಿಂದೆ ಇರುವ ಧೋರಣೆಗಳೇನು ಎಂಬುದು ತಿಳಿಯುತ್ತದೆ. ಮುಖ್ಯವಾಗಿ ಮಹಿಳಾ ಅಧ್ಯಯನ ವಿಶ್ಲೇಷಣೆ ಮಾಡುವುದು ಇದನ್ನೆ. ಜಾಹಿರಾತು ಮಾಧ್ಯಮಗಳು ಸಮಕಾಲೀನ ಸಂದರ್ಭದಲ್ಲಿ ಕೇವಲ ಆರ್ಥಿಕ ಕ್ಷೇತ್ರಕ್ಕೆ ಸೀಮಿತವಾಗದೆ ಜನಸಾಮಾನ್ಯರ ಸಾಂಸ್ಕೃತಿಕ ಬದುಕನ್ನು ನಿಯಂತ್ರಿಸುವಷ್ಟೆ ಪರಿಣಾಮಕಾರಿಯಾಗಿ ಬೆಳವಣಿಗೆ ಹೊಂದುತ್ತವೆ.