ಭಾಷೆ, ಸಮಾಜ ಮತ್ತು ಸಂಸ್ಕೃತಿ.

Authors

  • NAGARAJ V. BALIGER

Keywords:

ಸಮಾಜ, ಸಂಸ್ಕೃತಿ, ಭಾಷೆ, ಜಿಜ್ಞಾಸೆ, ಬದಲಾಣೆ

Abstract

ಭಾಷೆಯನ್ನು ಕುರಿತು ಭಾಷಾ ವಿಜ್ಞಾನಿಗಳು, ಸಮಾಜವನ್ನು ಕುರಿತು ಸಮಾಜ ವಿಜ್ಞಾನಿಗಳು, ಸಂಸ್ಕೃತಿಯನ್ನು ಕುರಿತು ಮಾನವಶಾಸ್ತ್ರಜ್ಞರು ಶಾಸ್ತ್ರೀಯವಾಗಿ ಅಧ್ಯಯನ ನೆಡೆಸಿ ವಿಶ್ಲೇಷಣೆ ಮಾಡಿದ್ದರೂ, ಈ ಶಿಸ್ತುಗಳ ಅಧ್ಯಯನ ವಿಷಯ ಈ ವಿಶ್ಲೇಷಕರ ಅಧ್ಯಯನದ ಗಡಿಗಳನ್ನು ದಾಟಿ ಚಾಚಿಕೊಂಡಿರುವುದು, ಏಕಕಾಲಕ್ಕೆ ಅಧ್ಯಯನಗಳ ಮಿತಿಯನ್ನು, ವಿಷಯದ ಘನತೆಯನ್ನು ಎತ್ತಿ ತೋರಿಸುತ್ತಿದೆ. ಹಲವಷ್ಟು ಸಮಸ್ಯೆಗಳಿಗೆ ತಮ್ಮ ತಮ್ಮ ನೆಲೆಯಲ್ಲಿ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲರಾದ ಈ ತಜ್ಞರು ತಮ್ಮ ನೆರವಿಗಾಗಿ ಇತರ ಶಿಸ್ತುಗಳತ್ತ ಕೈಚಾಚಿ ನಿಂತದ್ದು ಗಮನಾರ್ಹ ಸಂಗತಿ. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಅಂತಃಶಿಸ್ತೀಯ ಅಧ್ಯಯನಗಳಿಗೆ ಹೆಚ್ಚಿನ ಮನ್ನಣೆ ಪ್ರಾಪ್ತವಾಗುತ್ತದೆ. ಕೆಲವು ವಿದ್ವಾಂಸರು ಏಕಕಾಲದಲ್ಲಿ ಅನೇಕ ವಿಷಯಗಳ ಪರಿಣಿತಿ ಸಂಪಾದಿಸಿ ಭಾಷೆ , ಸಂಸ್ಕೃತಿ, ಸಮಾಜದ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿದ್ದಾರೆ. ಭಾಷೆ, ಸಮಾಜ, ಸಂಸ್ಕೃತಿಗಳು ಒಂದಕ್ಕೊಂದು ಆಂತರಿಕ ಸಂಬಂದಗಳನ್ನು ಹೊಂದಿರುವಂತವು. ಭಾಷೆ ಸಮಾಜದ ಕೂಸು ಸಂಸ್ಕೃತಿಯು ಸಮಾಜದ ಸ್ವಾಸ್ಥವನ್ನು ಕಾಪಾಡುವಂತದ್ದು. Society is a web of social relationship it is knitted through language ಎನ್ನುವ ಮಾತಿದೆ. ಸಮಾಜ ಮಾನವ ಸಂಬಂಧಗಳ ಹೆಣಿಕೆಯಾದ ಆದರೆ ಅದನ್ನು ಹೆಣೆದ ಮಾಂತ್ರಿಕ ಶಕ್ತಿ ಭಾಷೆ ಎನ್ನುತ್ತಾರೆ. ಸಮಾಜಶಾಸ್ತ್ರಜ್ಞರು What people do, and think is their culture language is the replica of culture ಎಂಬ ಸಂಸ್ಕೃತಿಯನ್ನು ಕುರಿತ ಸರಳ ವಿವರಣೆಯಲ್ಲಿ ಜನರ ದೈಹಿಕ ಹಾಗೂ ಮಾನಸಿಕ ಚಟುವಟಿಕೆಗಳೇ ಅವರ ಸಂಸ್ಕೃತಿ ಅದು ಭಾಷೆಯಲ್ಲಿ ಪ್ರತ್ರೀಕಗೊಳ್ಳುತ್ತದೆ. ಮೂರೂ ಒಂದರೊಡನೊಂದು ಅವಿನಾಸಂಬಂಧವನ್ನು ಹೆಣೆದುಕೊಂಡಿವೆ. ಒಂದನ್ನುಳಿದು ಇನ್ನೊಂದಕ್ಕೆ ಅಸ್ತಿತ್ವ ಪ್ರಾಪ್ತವಾಗುವುದಿಲ್ಲ. ಒಂದನ್ನು ಬಿಟ್ಟು ಇನ್ನೊಂದನ್ನು ಪರಿಗಣಿಸಲು ಬರುವುದಿಲ್ಲ. ಆದುದರಿಂದ ಭಾಷೆ ಪ್ರತ್ಯೇಕವಾಗಿ ಅಧ್ಯಯನ ಮಾಡಲಾಗುವುದಿಲ್ಲ. ಹಾಗೇ ಸಮಾಜ ಮತ್ತು ಸಂಸ್ಕೃತಿ.

Downloads

Published

05.08.2023

How to Cite

NAGARAJ V. BALIGER. (2023). ಭಾಷೆ, ಸಮಾಜ ಮತ್ತು ಸಂಸ್ಕೃತಿ. AKSHARASURYA, 2(09), 142–150. Retrieved from http://aksharasurya.com/index.php/latest/article/view/220

Issue

Section

Article