ಇತಿಹಾಸ ಪುಟಗಳಲ್ಲಿ ರುಖ್ಮಾಬಾಯಿ ಎಂಬ ಹೋರಾಟಗಾರ್ತಿ.
Keywords:
ಬಾಲ್ಯವಿವಾಹ, ಕನ್ಸೆಂಟ್ ಆಕ್ಟ್, ಮಹಿಳಾ ವೈದ್ಯೆ, ವಸಾಹತುಶಾಹಿ, ಸಾಮಾಜಿಕ ಸಾಂಪ್ರದಾಯಗಳನ್ನು, ಮಹಿಳಾ ಹಕ್ಕು, ಹೋರಾಟಗಾರ್ತಿAbstract
ವಸಾಹತುಶಾಹಿ ಭಾರತದ ಮಹಿಳಾ ಹಕ್ಕುಗಳ ಕಾರಣಕ್ಕಾಗಿ ಹೋರಾಟ ನಡೆಸಿದ ಹಲವು ಸಮಾಜ ಸುಧಾರಕರಲ್ಲಿ ರುಖ್ಮಾಬಾಯಿ ಕೂಡ ಒಬ್ಬರು. 1880 ರ ಸಾಂಪ್ರದಾಯವಾದಿ ಭಾರತೀಯ ಸಮಾಜದಲ್ಲಿ ಮಹಿಳೆಯರ ಮೇಲೆ ತಾರತಮ್ಯ ಮಾಡುವ ಸಾಮಾಜಿಕ ಸಾಂಪ್ರದಾಯಗಳನ್ನು ಅವರು ಪ್ರತಿಭಟಿಸಿ, 1891ರಲ್ಲಿ ವಯಸ್ಸಿನ ಕನ್ಸೆಂಟ್ ಆಕ್ಟ್ ಅಂಗೀಕಾರಕ್ಕೆ ಕಾರಣರಾದರು. ಅಂದಿನ ಕಾಲಕ್ಕೆ ಸಮಾಜದಲ್ಲಿ ದೊಡ್ಡ ಪಿಡುಗು ಎನ್ನಿಸಿದ ಬಾಲ್ಯವಿವಾಹ ಪದ್ಧತಿ ನಿರ್ನಾಮಕ್ಕೆ ರುಖ್ಮಾಬಾಯಿ ಸಾಕಷ್ಟು ಶ್ರಮಿಸಿದ್ದರು. ತಾವು ಅನುಭವಿಸಿದ ಕಷ್ಟಗಳನ್ನು ಬೇರೆ ಯಾವ ಹೆಣ್ಣು ಮಕ್ಕಳು ಅನುಭವಿಸಬಾರದು ಎಂದು ಬಾಲ್ಯ ವಿವಾಹದ ವಿರುದ್ಧ ಬಹಳ ಹಿಂದೆಯೇ ನ್ಯಾಯಾಲಯ ಮೆಟ್ಟಿಲು ಏರಿದರು. ಬಾಲ್ಯವಿವಾಹ ಪದ್ಧತಿ ನಿರ್ನಾಮಗೊಳಿಸದೆ ಹಾಗೂ ಸ್ತ್ರೀ ಶಿಕ್ಷಣ ಹೆಚ್ಚು ಹೆಚ್ಚು ಪಸರಿಸದೆ ನಮ್ಮ ಪರಿಸ್ಥಿತಿ ಸುಧಾರಿಸದು ಎಂದು ಸಮಾಜಕ್ಕೆ ಕೂಗಿ ಹೇಳಿದರು. ಅಮೂಲಕ ಮದುವೆಗೆ ಸಮ್ಮತಿ ಅಗತ್ಯ ಎಂದು ಕರೆ ನೀಡಿದ್ದರು. ಬಾಲ್ಯವಿವಾಹ ಪದ್ಧತಿ ಕುರಿತು ಭಿನ್ನ ಅಭಿಪ್ರಾಯಗಳನ್ನು ಮೂಡಿಸುವಲ್ಲಿ ರುಖ್ಮಾಬಾಯಿ ಯಶಸ್ವಿಯಾದ್ದರು.