ತಲ್ಲೂರ ರಾಯನಗೌಡರು.
Keywords:
ರಾಯನಗೌಡರು, ಸ್ವಾತಂತ್ರ್ಯ, ಕರ್ನಾಟಕ ಏಕೀಕರಣ, ಹೋರಾಟ, ರಾಜಕೀಯ, ಸಾಮಾಜಿಕAbstract
ಬೆಳಗಾವಿ ಜಿಲ್ಲೆಯಲ್ಲಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅನೇಕ ಮಹನೀಯರು ತಮ್ಮನ್ನು ತೊಡಗಿಸಿಕೊಂಡು ತಮ್ಮದೇ ಆದ ವೈಶಿಷ್ಟ್ಯತೆಯ ಬದುಕಿನೊಂದಿಗೆ ಹೋರಾಡುವ ಮೂಲಕ ಹೆಸರುವಾಸಿಯಾಗಿರುವರು. ಅಂಥವರ ಬದುಕು ಬರಹಗಳು ಇಂದಿನ ಪೀಳಿಗೆಗೆ ದೊರೆಯಬೇಕು. ಬೆೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರಲ್ಲಿ ತಲ್ಲೂರ ರಾಯನಗೌಡರ ಹೆಸರು ಕೂಡ ಪ್ರಮುಖವಾಗಿದೆ. ಅವರು ಗಾಂಧೀಜಿಯವರ ಭಾಷಣದಿಂದ ಪ್ರಭಾವಿತರಾಗಿ ತಮ್ಮ ಎಲ್.ಎಲ್.ಬಿ. ಶಿಕ್ಷಣವನ್ನು ಮೊಟಕುಗೊಳಿಸಿ ಸ್ವಂತ ಊರಾದ ತಲ್ಲೂರಲ್ಲಿ ನೆಲೆಸಿ ಹತ್ತಿರದ ಮುರಗೋಡ ಗುಡ್ಡದಲ್ಲಿ ಭೂಗತರಾಗಿದ್ದುಕೊಂಡು ತಮ್ಮ ಸಹಚರರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜೈಲುವಾಸ ಅನುಭವಿಸಿದವರು. ಸ್ವಾತಂತ್ರ್ಯ ನಂತರ ಕರ್ನಾಟಕ ಏಕೀಕರಣ ಮತ್ತು ಕಿತ್ತೂರು ಕುರಿತು ಸಂಶೋಧನೆಯಲ್ಲಿ ತೊಡಗಿಕೊಂಡು ತಮ್ಮದೇ ಆದ ಬರವಣಿಗೆ, ರಾಜಕೀಯ ಮತ್ತು ಸಾಮಾಜಿಕ ಬದುಕನ್ನು ಬದುಕಿ ಬಾಳಿದರು. ಅವರ ಕುರಿತು ಇದುವರೆಗೂ ಯಾವುದೇ ವಿಶ್ವವಿದ್ಯಾಲಯದಲ್ಲಿ ಸಂಶೋಧನೆಗಳು ಜರುಗಿರುವುದಿಲ್ಲ. ತಲ್ಲೂರ ಗ್ರಾಮದಲ್ಲಿ ರಾಯನಗೌಡರ ಕುಟುಂಬದವರು ಮತ್ತು ಅವರನ್ನು ಹತ್ತಿರದಿಂದ ಕಂಡವರನ್ನು ಈ ಕುರಿತು ವಿಚಾರಿಸಿದಾಗ ಮಹತ್ವದ ಸಂಗತಿಗಳು ದೊರಕಿದವು. ಈ ಕುರಿತು ಅವರ ವ್ಯಕ್ತಿತ್ವದ ಮೇಲೆ ಈ ಬರಹ ಬೆಳಕು ಚಲ್ಲುತ್ತದೆ.