ವೈ. ಎನ್. ಹೊಸಕೋಟೆ (ಯಲ್ಲಪ್ಪ ನಾಯಕನ ಹೊಸಕೋಟೆ) ಪಾಳೆಯಗಾರರು: ಚಾರಿತ್ರಿಕ ವಿಶ್ಲೇಷಣೆ.
Keywords:
ಅಮರನಾಯಕ, ಗಿರಿದುರ್ಗ, ಕಂಪಳ, ಸಂಸ್ಥಾನ, ಪಾರುಪತ್ತೇದಾರ, ದಳವಾಯಿ, ಪಾಳೆಯಪಟ್ಟು, ಕಣಜ, ರಾಜಮಹಲ್, ಸುಭಿಕ್ಷೆ, ಪ್ರಾವಿಣ್ಯತೆ, ಆಪ್ತAbstract
ವೈ.ಎನ್. ಹೊಸಕೋಟೆ ಗ್ರಾಮದ ಚಾರಿತ್ರಿಕ ಹಿನ್ನೆಲೆ ಹಾಗೂ ಈ ಗ್ರಾಮದಲ್ಲಿ ಚಿಕ್ಕ ಪಾಳೆಯಪಟ್ಟನ್ನು ನಿರ್ಮಿಸಿಕೊಂಡು ಆಳ್ವಿಕೆ ಮಾಡಿದ ಪಾಳೆಯಗಾರ ಯಲ್ಲಪ್ಪನಾಯಕನು ಅಧಿಕಾರಕ್ಕೆ ಬರುವಾಗ ತನ್ನ ಜೀವನದಲ್ಲಿ ನಡೆದ ಕೆಲವು ಪ್ರಸಂಗಗಳು ಹಾಗೂ ಅಧಿಕಾರಕ್ಕೆ ಬಂದಾಗ ತನ್ನ ಪಾಳೆಯಪಟ್ಟನ್ನು ವಿಸ್ತರಿಸಿಕೊಳ್ಳಲು ಶತ್ರು ಪಾಳೆಯಗಾರನಾದ ಕುಂದುರ್ಪಿಯ ಪೆದ್ದಕೊನೇಟಿ ನಾಯಕನ ಅಧೀನದಲ್ಲಿದ್ದ ಕೆಲವು ಪ್ರಾಂತ್ಯಗಳನ್ನು ವಶಪಡಿಸಿಕೊಳ್ಳಲು ಮಾಡಿದ ಪ್ರಯತ್ನಗಳು ಮತ್ತು ಇವರ ಅಧಿಕಾರದ ಅವಧಿಯಲ್ಲಿ ನಿರ್ಮಿಸಿರುವ ಕೆಲವು ಸ್ಮಾರಕಗಳ ಕುರಿತು ಪರಿಚಯಿಸಲಾಗಿದೆ. ಹಾಗೆಯೇ ಇವರ ನಂತರ ತನ್ನ ಪುತ್ರನಾದ ಬಡ ತಿಮ್ಮನಾಯಕನ ಆಳ್ವಿಕೆ ಮತ್ತು ಹೈದರಾಲಿಯು ವಶಪಡಿಸಿಕೊಂಡಿರುವ ಕುರಿತು ಸಂಕ್ಷೀಪ್ತವಾಗಿ ವಿಶ್ಲೇಷಿಸುವ ಪ್ರಯತ್ನ ಮಾಡಲಾಗಿದೆ.