ಊರುಕೇರಿಯ ಹೋರಾಟದ ನೆಲೆಗಳು.

Authors

  • LAKSHMINARASAMMA

Keywords:

ಊರುಕೇರಿ, ಆತ್ಮಚರಿತ್ರೆ, ಹೋರಾಟ, ಭೂಸಾ ಚಳುವಳಿ, ಖಡ್ಗವಾಗಲಿ ಕಾವ್ಯ, ಸಮಾವೇಶ

Abstract

ಡಾ. ಸಿದ್ದಲಿಂಗಯ್ಯನವರು ಬರೆದಿರುವ ‘ಊರುಕೇರಿ’ ಎಂಬ ಆತ್ಮಚರಿತ್ರೆಯಲ್ಲಿ ಹೋರಾಟಗಳು ಮುಖ್ಯವಾಗಿದ್ದು, ದಲಿತರ ಹಾಗೂ ಬಡ ಜೀವಿಗಳ ಪರ ನಿಂತು ಎಲ್ಲ ರೀತಿಯ ಸೌಲಭ್ಯಗಳನ್ನು ಕೊಡಿಸುವಲ್ಲಿ ಲೇಖಕರು ಮುಂದಾಗಿದ್ದಾರೆ. ಲೇಖಕರು ಬಡವರ ಶಕ್ತಿ ಯಾವುದೆಂದರೆ ಹೋರಾಟವೆಂದು ತಿಳಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ನಡೆದ ಸಮಾವೇಶದಲ್ಲಿ ದಲಿತರು ಘೋಷಣೆಗಳನ್ನು ಕೂಗುತ್ತಾ ಮುನ್ನಡೆಯುತ್ತಾರೆ. ಈ ಹೋರಾಟದಲ್ಲಿ ಸಿದ್ಧಲಿಂಗಯ್ಯನವರು ಸಾಮಾನ್ಯ ವ್ಯಕ್ತಿಯಂತೆ ನಡೆದುಕೊಳ್ಳುತ್ತಾರೆ. ಲೇಖಕರು ಬಿ. ಬಸವಲಿಂಗಪ್ಪನವರ ಭೂಸಾ ಚಳುವಳಿಯಲ್ಲಿ ಭಾಗವಹಿಸಿ ಕನ್ನಡ ಸಾಹಿತ್ಯದಲ್ಲಿ ಬಹಳಷ್ಟು ಭೂಸ ಇದೆ, ಅದರಲ್ಲಿ ಯಾವ ಹುರುಳಿಲ್ಲ ಎಂದು ಹೇಳುವ ಮೂಲಕ ಬಸವಲಿಂಗಪ್ಪನವರ ಪರವಾಗಿ ವಾದಿಸುತ್ತಾರೆ. ಹೋರಾಟ ಮಾಡುವುದೆಂದರೆ ಕೇವಲ ಘೋಷಣೆ ಕೂಗುವುದು ಮಾತ್ರವಲ್ಲ ಆತ್ಮಸ್ಥೈರ್ಯವನ್ನು ಹೊಂದಬೇಕು ಎಂಬುದಾಗಿ ಲೇಖಕರು ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹೋರಾಟದಲ್ಲಿ ಪ್ರಾಣವನ್ನು ಬೇಕಾದರೂ ಕೊಡುತ್ತೇವೆ ಎಂಬ ಘೋಷಣೆಯನ್ನು ಊರುಕೇರಿಯಲ್ಲಿ ವ್ಯಕ್ತಪಡಿಸಿದ್ದಾರೆ. ಲೇಖಕರು ದಲಿತರು ಮತ್ತು ದಲಿತೇತರಾರು ನಡುವೆ ವೈಷ್ಯಮ್ಯ ಉಂಟಾದಾಗ ಯಾವುದೇ ರೀತಿಯ ಘರ್ಷಣೆಗಳು ಆಗದಂತೆ ಅವರಿಬ್ಬರಿಗೂ ಸಮಾಧಾನ ಮಾತುಗಳನ್ನು ಹಾಡಿ ಶಾಂತಿಯನ್ನು ಮೂಡಿಸುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದಲಿತನ ಮೇಲೆ ಆದಂತಹ ದೌರ್ಜನ್ಯವನ್ನು ಕಂಡು ಸಮಾಧಾನ ನೀಡುತ್ತಾರೆ. ಸಿದ್ದಲಿಂಗಯ್ಯನವರ ‘ಊರಿಕೇರಿ’ ಆತ್ಮಚರಿತ್ರೆಯಲ್ಲಿ ಹೋರಾಟದ ಸಂದರ್ಭಗಳು ಹೇರಳವಾಗಿವೆ. ಬದುಕಿನಲ್ಲಿ ಬಡವರೆಲ್ಲರೂ ಒಂದುಗೂಡಿ ಹೋರಾಟ ಮಾಡಲೇಬೇಕೆಂದು ತಿಳಿಸಿದ್ದಾರೆ.

Downloads

Published

05.08.2023

How to Cite

LAKSHMINARASAMMA. (2023). ಊರುಕೇರಿಯ ಹೋರಾಟದ ನೆಲೆಗಳು. AKSHARASURYA, 2(09), 89–97. Retrieved from http://aksharasurya.com/index.php/latest/article/view/214

Issue

Section

Article