ಕಿಟೆಲರ ಧಾರ್ಮಿಕ ಸಾಹಿತ್ಯ.
Keywords:
ಕಥಾಮಾಲೆ, ಕ್ರಿಸ್ತನ ಚರಿತ್ರೆ, ಪರಮಾತ್ಮನ ಜ್ಞಾನ, ಪಾಪದ ಪರಿಕಲ್ಪನೆ, ಬೈಬಲ್ ನವೀಕರಣ, ಬಾಶೆಲ್ ಮಿಶನ್Abstract
ಕಿಟೆಲರ ಧಾರ್ಮಿಕ ಸಾಹಿತ್ಯ ವಿಸ್ತಾರವಾದದ್ದು. ಗದ್ಯ-ಪದ್ಯಗಳಲ್ಲಿ ಕ್ರೈಸ್ತ ಮತದ ತತ್ವಗಳನ್ನು ಪ್ರತಿಪಾದಿಸಿದ್ದು ಮಾತ್ರವಲ್ಲದೆ ಅವರು ಹಿಂದೂ ದೇವತಾರಾಧನೆಯ ಕುರಿತು ಕೃತಿಗಳನ್ನು ರಚಿಸಿದ್ದಾರೆ. ವಿಶೇಷವಾಗಿ ಮಿಶನರಿಯಾಗಿ ಆಗಮಿಸಿದ ಕಿಟೆಲರು ಕನ್ನಡ ನಾಡಿನ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಕ್ರೈಸ್ತ ಮತ ಪ್ರಚಾರ ಮಾಡಬೇಕಾಗಿತ್ತು. ಸುವಾರ್ತೆ ಸಾರುತ್ತಿರುವ ಸಂದರ್ಭದಲ್ಲಿ ಅವರು ಅನುಸರಿಸುತ್ತಿರುವ ಜರ್ಮನ್ ಪದ್ಧತಿ ಸರಿಯಲ್ಲವೆಂದು ಅವರ ಗಮನಕ್ಕೆ ಬಂತು. ಜರ್ಮನ್ ಭಾಷೆಯಿಂದ ಅನುವಾದಗೊಂಡ ಪ್ರಾರ್ಥನಾ ಪಠ್ಯಗಳು ದೇಶೀಯ ಲಯಕ್ಕೆ ಹೊಂದುತ್ತಿರಲಿಲ್ಲ. ಆದ್ದರಿಂದ ದೇಶೀಯ ಪದ್ಧತಿಯಲ್ಲಿ ಪದ್ಯ ರಚಿಸಿ ಸುವಾರ್ತೆ ಸಾರುವುದು ಹೆಚ್ಚು ಅನುಕೂಲಕರವೆಂದು ಅವರು ಮನಗಂಡಿದ್ದರು. ಅದಕ್ಕಾಗಿ ತಾವೇ ಸ್ವತಃ ಧಾರ್ಮಿಕ ಸಾಹಿತ್ಯ ರಚನೆಗೆ ತೊಡಗಿದರೆನ್ನಲಾಗಿದೆ.