ಡಾ. ರಾಜಶೇಖರ ನೀರಮಾನ್ವಿ ಕಥೆಗಳಲ್ಲಿ ಕಲ್ಯಾಣ ಕರ್ನಾಟಕದ ಗ್ರಾಮೀಣ ಜನ-ಜೀವನ.
Keywords:
ವ್ಯಕ್ತಿನಿಷ್ಠ, ಏಕಾಕಾರ, ಪೀರಲದೇವರ, ಬಗೀಚದಾಗ, ಮಾಟೆ ಬಕ್ಕಣ, ಗಿರಕಿAbstract
ಡಾ. ರಾಜಶೇಖರ ನೀರಮಾನ್ವಿ ಪ್ರಕಟಿಸಿದ್ದು ಎರಡೇ ಕವನ ಸಂಕಲನ. ಆದರೆ ಅವರ ಕಥೆಗಳು ಕನ್ನಡ ಕಥಾ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಹೆಜ್ಜೆಗುರುತನ್ನು ಉಳಿಸಿವೆ. ನೀರಮಾನ್ವಿ ಕಥೆಗಳ ಕುರಿತಾದ ಈ ಲೇಖನವು ಸಾಮಾಜಿಕ, ಸಾಹಿತ್ಯಿಕ, ಪ್ರಾದೇಶಿಕ ಅಧ್ಯನವಾಗಿದ್ದು ವಸ್ತು ವಿಶ್ಲೇಷಣಾತ್ಮಕವಾಗಿದೆ. ಮಾತ್ರವಲ್ಲ ನೀರಮಾನ್ವಿಯವರ ಕಥೆಗಳಲ್ಲಿ ಬರುವ ಕಲ್ಯಾಣ ಕರ್ನಾಟಕದ ಪ್ರಾದೇಶಿಕ ಭಾಷೆಯ ಸೊಗಡನ್ನು ಗುರುತಿಸುವುದು. ಕಥೆಯಲ್ಲಿ ಬರುವ ತಾತ್ವಿಕತೆ ಮತ್ತು ಸಾತ್ವಿಕ ಸ್ವಭಾವವನ್ನು ಗುರುತಿಸುವುದು. ಕಥೆಯ ನಿರ್ವಹಣಾ ತಂತ್ರವನ್ನು ಗುರುತಿಸುವುದು. ಕಲ್ಯಾಣ ಕರ್ನಾಟಕದ ಪ್ರಾದೇಶಿಕ ನುಡಿಗಟ್ಟನ್ನು ಗುರುತಿಸಿ ಆ ಮೂಲಕ ಇಲ್ಲಿಯ ಜನಜೀವನವನ್ನು ಲೇಖಕರು ತಮ್ಮ ಕಥೆಯಲ್ಲಿ ಹೇಗೆ ಕಟ್ಟಿಕೊಟ್ಟಿದ್ದಾರೆ ಎಂಬುದನ್ನು ಕುರಿತ ಅಧ್ಯಯನವಾಗಿದೆ.