ದಲಿತ ಚಳುವಳಿಯ ಭಾಷೆ ಮತ್ತು ಸಾಹಿತ್ಯ.
Keywords:
ದಲಿತ, ಭಾಷೆ, ಸಾಹಿತ್ಯ, ಹಸಿವು, ಚಳವಳಿ, ಗ್ರಾಮ್ಯಭಾಷೆAbstract
ದಲಿತ ಸಾಹಿತ್ಯದಲ್ಲಿನ ಬಡತನ, ಶೋಷಣೆ, ಹಸಿವು, ಆಕ್ರೋಶ, ಸಿಟ್ಟು, ಸಂಸ್ಕೃತಿ ಇತ್ಯಾದಿ ವಿಷಯಗಳನ್ನು ಕುರಿತು ಹಲವಾರು ಸಾಹಿತಿಗಳು, ವಿಮರ್ಶಕರು ವಿಶ್ಲೇಷಿಸಿದ್ದಾರೆ. ಈ ವಿಷಯಗಳನ್ನು ಮುಖಾಮುಖಿಯಾಗಲು ದಲಿತ ಸಾಹಿತಿಗಳು ಬಳಸಿದ ವಿಭಿನ್ನ ರೀತಿಯ ಭಾಷೆಯನ್ನು ಕುರಿತು ಕೆಲವೇ ಜನರು ಮಾತ್ರ ತಮ್ಮ ಗಮನಹರಿಸಿದ್ದು ವಿಶೇಷ. ಅದರಲ್ಲೂ ಸಿದ್ಧಲಿಂಗಯ್ಯನವರ ಹೊಲೆ-ಮಾದಿಗರ ಹಾಡು, ದೇವನೂರರ ಕುಸುಮಬಾಲೆ ಇತ್ಯಾದಿ ಕೆಲವೇ ಕೃತಿಗಳ ಭಾಷೆಯ ಕುರಿತು ಮಾತನಾಡುತ್ತಾರೆ ಹೊರತು ಅದರಿಂದಾಚೆಗೆ ಒಟ್ಟು ದಲಿತ ಸಾಹಿತ್ಯದ ಭಾಷೆಯ ಭಿನ್ನತೆ, ನಿರೂಪಣೆ ಕುರಿತು ಮಾತನಾಡುವುದು ಕಡಿಮೆ ಎಂದೇ ಹೇಳಬಹುದು. ಸಾಹಿತ್ಯವಾಗಲಿ, ವಿಮರ್ಶೆಯಾಗಲಿ ಭಾಷೆಯ ಅಭಿವ್ಯಕ್ತಿ ಮುಖ್ಯವಾದದ್ದು. ಆ ನಿಟ್ಟಿನಲ್ಲಿ ದಲಿತ ಸಾಹಿತ್ಯದ ಭಾಷೆಯು ಕಟ್ಟಿಕೊಡುವ ವಿಭಿನ್ನ ನೋಟ ವಿಶಿಷ್ಟವಾದದ್ದು. ಈ ರೀತಿಯ ಭಾಷೆಯ ಬಳಕೆಗೆ ತಮ್ಮ ಬದುಕನ್ನು ಮತ್ತು ಸಂಸ್ಕೃತಿಯನ್ನು ಏಕಕಾಲದಲ್ಲಿ ಜನರೆದುರು ತೆರೆದಿಡುವ ಅಗತ್ಯತೆಯನ್ನು ದಲಿತ ಸಾಹಿತಿಗಳು ಕಂಡುಕೊಂಡದ್ದು ಮುಖ್ಯವಾದದ್ದು.