ಏಜಾಕ್ಸ್ ಮತ್ತು ಅಶ್ವತ್ಥಾಮನ್ ನಾಟಕಗಳ ತೌಲನಿಕ ಓದು.
Keywords:
ಸ್ವಾಭಿಮಾನ, ಸ್ವಾಮಿ ಭಕ್ತಿ, ಅವಮಾನ, ಆತ್ಮ ವೈಭವ, ಆತ್ಮ ಮರುಕAbstract
ಭಾರತದಲ್ಲಿ ಪುರಾಣ ಪ್ರಸಿದ್ಧವಾದ ಅನೇಕ ಕಥೆಗಳಿರುವಂತೆಯೇ ಗ್ರೀಸ್ ದೇಶದಲ್ಲೂ ಪುರಾಣ ಪ್ರಸಿದ್ಧ ಕಥೆಗಳಿವೆ. ಹಲವಾರು ಗ್ರೀಕ್ ನಾಟಕಗಳ ಕಥಾವಸ್ತು ಪುರಾಣ ಪುರುಷರನ್ನು ಕುರಿತದ್ದೆ ಆಗಿದೆ. ಅಂತಹ ನಾಟಕಗಳಲ್ಲಿ ಸಾಫೋಕ್ಲಿಸ್ ಮಹಾಕವಿಯ ಏಜಾಕ್ಸ್ ನಾಟಕವೂ ಒಂದು. ಇದೊಂದು ದುರಂತ ನಾಟಕ. ಈ ನಾಟಕವನ್ನು ಓದಿ ಪ್ರಭಾವಗೊಂಡ ಬಿ.ಎಂ.ಶ್ರೀ ಅವರು ಮಹಾಭಾರತದ ಗದಾಸೌಪ್ತಿಕ ಪರ್ವದಲ್ಲಿ ಬರುವ ಅಶ್ವತ್ಥಾಮನ ಪ್ರಸಂಗವನ್ನು ಆಧರಿಸಿ ಅಶ್ವತ್ಥಾಮನ್ ನಾಟಕವನ್ನು ರಚಿಸಿದ್ದಾರೆ. ಬಿ.ಎಂ.ಶ್ರೀ ಅವರು ಪಾಶ್ಚಾತ್ಯ ನಾಟಕ ಒಂದನ್ನು ಯಥಾವತ್ತಾಗಿ ಕನ್ನಡಕ್ಕೆ ತರದೆ ಅದರ ಪ್ರಭಾವದಿಂದ ಸ್ವತಂತ್ರ ಭಾರತೀಯ ನಾಟಕವನ್ನು ರಚಿಸಿದ್ದಾರೆ. ಈ ಮೂಲಕ ಕನ್ನಡ ಸಾಹಿತ್ಯಕ್ಕೆ ಅವರು ದುರಂತ ನಾಟಕವನ್ನು ಪರಿಚಯಿಸಿದರು.