ಗಂಗಾವತಿ ತಾಲೂಕಿನ ಜಲವೀರರ ವೀರಗಲ್ಲುಗಳು.
Keywords:
ಸಂಸ್ಕೃತಿ, ವೀರಪೂಜೆ, ವೀರಗಲ್ಲು, ಪರಂಪರೆ, ಪರಾಕ್ರಮ, ಸ್ವರ್ಗ, ಕೈಲಾಸ, ಹರಿಗೋಲು, ಜಲ, ಹುಟ್ಟು, ಅಂಬಿಗ, ತುಂಗಭದ್ರಾ, ನದಿ, ಸಂಸ್ಥಾನ, ಐತಿಹ್ಯ, ಹೇರೂರು, ಆನೆಗೊಂದಿ, ಕೆರೆ, ಈಜುಗಾರAbstract
ವೀರಪೂಜೆಯ ಪರಂಪರೆ ಪ್ರಾಚೀನ ಕಾಲದಿಂದಲೂ ಮುಂದುವರಿದುಕೊಂಡು ಬಂದಿದೆ. ಯುದ್ಧ, ತುರುಗಾಳಗ, ಬೇಟೆ, ದರೋಡೆಕೋರರಿಂದ ಗ್ರಾಮಗಳ ರಕ್ಷಣೆ, ಕಳ್ಳರೊಡನೆ ಹೋರಾಡಿ ಮಡಿದವರ, ನೀರಿನಲ್ಲಿ ಬಿದ್ದವರ ರಕ್ಷಣೆ ಮುಂತಾದ ಸಂದರ್ಭದಲ್ಲಿ ಮಡಿದ ವೀರರ ನೆನಪಿಗಾಗಿ ವೀರಗಲ್ಲುಗಳನ್ನು ಹಾಕಿಸುವ ಪರಂಪರೆ ಪ್ರಾಚೀನಕಾಲದಿಂದಲೂ ಬೆಳೆದು ಬಂದಿದೆ. ಅದರಲ್ಲಿ ಕೆರೆ, ಹೊಂಡ, ನದಿ, ಸಮುದ್ರದ ನೀರಿನಲ್ಲಿ ರಕ್ಷಣೆ ಮಾಡುವ ಸಂದರ್ಭದಲ್ಲಿ ಮಡಿದವರ ಜಲವೀರರ ವೀರಗಲ್ಲುಗಳು ದೊರಕುವುದು ಬಹಳ ವಿರಳ. ಅಂತದರಲ್ಲಿ ತುಂಗಭದ್ರಾ ನದಿ ಎಡದಂಡೆಯ ಮೇಲಿರುವ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿ ಮೂರು ಜಲವೀರರ(ಅಂಬಿಗರ) ವೀರಗಲ್ಲುಗಳು ಕಂಡುಬರುತ್ತವೆ. ಅವುಗಳನ್ನು ವಿಶ್ಲೇಷಿಸುವ ಪ್ರಯತ್ನ ಈ ಲೇಖನದಲ್ಲಿ ಮಾಡಲಾಗಿದೆ.