ಸಿದ್ಧಲಿಂಗಯ್ಯನವರ ನಾಟಕಗಳು: ಶೋಷಿತ ಸಮುದಾಯಗಳ ಆತ್ಮವಿಮರ್ಶೆ ಮತ್ತು ಆತ್ಮಾಭಿಮಾನದ ಸಂಕಥನ.
Keywords:
ನಾಟಕ ಸಾಹಿತ್ಯ, ದಲಿತ ಸಾಹಿತ್ಯ, ಸಾಂಸ್ಕೃತಿಕ ವಿಮರ್ಶೆ, ಸಾಂಸ್ಕೃತಿಕ ರಾಜಕಾರಣAbstract
ಕನ್ನಡ ಸಾಂಸ್ಕೃತಿಕ ಲೋಕದ ಮಹತ್ವದ ಚಿಂತಕರೂ, ಕವಿಗಳೂ ಆದ ಸಿದ್ಧಲಿಂಗಯ್ಯನವರು ತಮ್ಮ ಸಾಹಿತ್ಯ, ಚಿಂತನೆ, ಹೋರಾಟಗಳ ಮೂಲಕ ಸಮಾನತೆಯನ್ನು ನನಸಾಗಿಸಲು ನಿರಂತರ ಹೋರಾಡಿದವರು. ಅಸಮಾನತೆಯ ಮೂಲಬೇರುಗಳನ್ನು ಶೋಧಿಸುವ ಮೂಲಕ ಶೋಷಕ ವರ್ಗದ ಹುನ್ನಾರಗಳನ್ನು ನಿಷ್ಠುರವಾಗಿ ವ್ಯಂಗ್ಯಕ್ಕೆ ಒಳಪಡಿಸಿದವರು. ತಮ್ಮ ಸಾಹಿತ್ಯದ ಮೂಲಕ ಶೋಷಿತ ಸಮೂದಾಯಗಳ ಆತ್ಮಘನತೆಯನ್ನು ಎತ್ತಿ ಹಿಡಿಯುವುದರೊಂದಿಗೆ ಮಾನವೀಯ ಸಮಸಮಾಜವನ್ನು ಕಟ್ಟುವ ಕನಸು ಕಂಡವರು. ಸಿದ್ಧಲಿಂಗಯ್ಯನವರ ಏಕಲವ್ಯ, ಪಂಚಮ ಮತ್ತು ನೆಲಸಮ ಈ ಮೂರೂ ನಾಟಕಗಳು ನಮ್ಮ ಸಾಮಾಜಿಕ ವ್ಯವಸ್ಥೆಯ ತರತಮಗಳ ಮೂಲ ಬೇರುಗಳನ್ನು ತಡಕಾಡುವುದರ ಜೊತೆಗೆ ಶೋಷಿತ ಸಮುದಾಯಗಳ ಆತ್ಮವಿಮರ್ಶೆ ಮತ್ತು ಆತ್ಮಾಭಿಮಾನದ ಸಂಕಥನಗಳನ್ನು ಕಟ್ಟಿಕೊಡುತ್ತವೆ.