ಪಶ್ಚಿಮ ಮತ್ತು ಪೂರ್ವಗಳಲ್ಲಿ ಭಾಷಾಂತರ ಅಧ್ಯಯನದ ಪ್ರಾಥಮಿಕ ಚರ್ಚೆಗಳು.

Authors

  • VIJAYENDRA KUMAR G. L.

Keywords:

ಭಾಷಾಂತರ, ಮೆಟಾಫ್ರೇಸ್, ಪ್ಯಾರಾಫ್ರೇಸ್, ಅನುಕರಣೆ, ಅಳವಡಿಕೆ, ಅನುವಾದ, ಅನ್-ಟ್ರಾನ್ಸ್ಲೇಟಬಲ್, ಬ್ಯಾಕ್-ಟ್ರಾನ್ಸ್ಲೇಷನ್, ದುಬಾಷಿ ಮತ್ತು ಭಾಷಾಂತರಕಾರ, ಆಕರಭಾಷೆ, ಉದ್ದಿಷ್ಟ ಭಾಷೆ

Abstract

ಪಶ್ಚಿಮದ ಭಾಷಾಂತರ ಸಿದ್ಧಾಂತಗಳ ಪ್ರಕಾರ ಭಾಷಾಂತರ ಪ್ರಕ್ರಿಯೆಯು ಆರಂಭವಾದದ್ದು ಲಿಖಿತ ರೂಪದ ಸಾಹಿತ್ಯ ರಚನೆಯಾದ ಮೇಲೆಯೇ. ಜನಪದ ಸಾಹಿತ್ಯಕ್ಕೆ ಪಶ್ಚಿಮವು ಅಷ್ಟೊಂದು ಪ್ರಾಮುಖ್ಯತೆ ನೀಡಲಿಲ್ಲವಾದ್ದರಿಂದ ಮತ್ತು ಅವರಲ್ಲಿ ಲಿಖಿತ ರೂಪದ ಸಾಹಿತ್ಯವನ್ನಷ್ಟೆ ಭಾಷಾಂತರ ಅಧ್ಯಯನದ ಶಿಸ್ತಿಗೆ ಒಳಪಡಿಸಿ ನೋಡುವ ಪರಿಪಾಠವಿದ್ದುದರಿಂದ ಅಲ್ಲಿ ಇಂತಹ ನಂಬಿಕೆ ಇದೆ. Oral Translation ಬಗೆಗೆ ಅವರು ಚರ್ಚೆ ನಡೆಸಿದ್ದಾರಾದರೂ, ಸಾಹಿತ್ಯವನ್ನು ಈ ಪರಿಧಿಯಲ್ಲಿ ಇಟ್ಟು ನೋಡಿಲ್ಲ. ಆದರೆ ನಮ್ಮ ಭಾರತೀಯ ಸಂದರ್ಭಕ್ಕೆ ಸಂಬಂಧಿಸಿದಂತೆ ಚರ್ಚಿಸುವಾಗ ಹೀಗೆ ಹೇಳಲಾಗುವುದಿಲ್ಲ. ಪುರಾಣಗಳು, ಪ್ರಾಚೀನ ಕಾವ್ಯ ಕೃತಿಗಳು ಮತ್ತು ಜನಪದ ಕೃತಿ ಸಮುಚ್ಛಯಗಳು ಲಿಖಿತ ರೂಪಕ್ಕೆ ಬರುವುದಕ್ಕಿಂತ ಮೊದಲೇ ಅನ್ಯ ಭಾಷೆಗಳಿಗೆ ಅನುವಾದಗೊಂಡಿವೆ. ಪೂರ್ಣ ಪ್ರಮಾಣದಲ್ಲಿ ಕೆಲವು ಕೃತಿಗಳು ಅನುವಾದಗೊಂಡಿದ್ದರೆ, ಇನ್ನು ಕೆಲವು ಭಾಗಶಃ ಅನುವಾದಗೊಂಡಿವೆ. ಒಂದೇ ಜನಪದ ಕಥೆಯು ಭಾರತದ ಹಲವು ಭಾಷೆಗಳಲ್ಲಿ ಬೇರೆ ಬೇರೆ ಆವೃತ್ತಿಗಳಲ್ಲಿ ಪ್ರಚಲಿತದಲ್ಲಿರುವುದನ್ನು ನೋಡಿದರೆ ಈ ಅಂಶ ಸ್ಪಷ್ಟವಾಗುತ್ತದೆ. (ಗಮನಿಸಿ: ಫೋಕ್ ಟೇಲ್ಸ್ ಫ್ರಂ ಇಂಡಿಯಾ, ಎ.ಕೆ. ರಾಮಾನುಜನ್, 1992) ಈ ಹಿನ್ನೆಲೆಯಲ್ಲಿ ಪಶ್ಚಿಮ ಮತ್ತು ಪೂರ್ವಗಳಲ್ಲಿ ನಡೆದ ಭಾಷಾಂತರ ಪ್ರಕ್ರಿಯೆಗಳನ್ನು ತೌಲನಿಕ ಚರ್ಚೆಗೆ ಒಳಪಡಿಸಿ ಭಾಷಾಂತರ ಮೀಮಾಂಸೆಯು ಬೆಳೆದು ಬಂದ ಬಗೆಯನ್ನು ಅರಿಯಬೇಕಿದೆ. ಇಲ್ಲಿ ಅಂತಹ ಕಿರುಪ್ರಯತ್ನವನ್ನು ಮಾಡಲಾಗಿದೆ.

Downloads

Published

05.08.2023

How to Cite

VIJAYENDRA KUMAR G. L. (2023). ಪಶ್ಚಿಮ ಮತ್ತು ಪೂರ್ವಗಳಲ್ಲಿ ಭಾಷಾಂತರ ಅಧ್ಯಯನದ ಪ್ರಾಥಮಿಕ ಚರ್ಚೆಗಳು. AKSHARASURYA, 2(09), 13–22. Retrieved from http://aksharasurya.com/index.php/latest/article/view/206

Issue

Section

Article