ಡಾ. ರಂಗರಾಜ ವನದುರ್ಗ ಅವರ “ಬಂಡೆದ್ದವರು” ನಾಟಕದಲ್ಲಿ ಬದುಕಿನ ನೆಲೆ.
Abstract
ಸಮಾಜದಲ್ಲಿ ವಂಚನೆಗೆ ಒಳಗಾದ ಜನರು ಬದುಕಿ ತಮ್ಮ ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಾ ಬಂದಿರುವುದನ್ನು ಕಾಣಬಹುದು. ತುಳಿತಕ್ಕೆ ಒಳಗಾದ ಸಮುದಾಯದವರು ಸಾಮಾಜಿಕ ನ್ಯಾಯವನ್ನು ನಿರ್ಮಾಣ ಮಾಡುವ ಮೂಲಕ ಅವರಿಗೆ ಆಗಿರುವ ಅಥವಾ ಅವರಿಗೆ ಮಾಡಲಾಗಿರುವ ಅನ್ಯಾಯವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಆ ಸಮುದಾಯವನ್ನು ಸಮಾಜದ ಉನ್ನತ ಶ್ರೇಣಿಗೆ ತರುವುದು ಬಹುಮುಖ್ಯ. ಅದಕ್ಕಾಗಿ ಪ್ರಜ್ಞಾವಂತ ವ್ಯಕ್ತಿ ಆ ಸಮುದಾಯದಲ್ಲಿ ಅಕ್ಷರ ಕಲಿತು ಬೆಳೆದರೆ ಪ್ರತಿಯೊಬ್ಬರಿಗೂ ನ್ಯಾಯ ಸಿಗುತ್ತದೆ. ಈ ನೆಲೆಯಲ್ಲಿಯೇ ಡಾ.ರಂಗರಾಜ ವನದುರ್ಗ ಅವರ ‘ಬಂಡೆದ್ದವರು’ ನಾಟಕ ರೂಪುಗೊಂಡಿದೆ.