ಜತ್ತಪ್ಪ ರೈ ಅವರ ‘ಬೇಟೆಯ ನೆನಪುಗಳು’ ಕೃತಿಯ ಅವಲೋಕನ.
Abstract
ದಕ್ಷಿಣ ಕನ್ನಡ ಜಿಲ್ಲೆಯ ಕೆದಂಬಾಡಿ ಜತ್ತಪ್ಪ ರೈಯವರು ಹೊಸಗನ್ನಡದ ಮೃಗಯಾ ಸಾಹಿತ್ಯಕ್ಕೆ ನೀಡಿದ ಕೊಡುಗೆ ಹಿರಿದು. ಬೇಟೆಯ ಗೀಳನ್ನು ಬಾಲ್ಯದಲ್ಲೇ ಬೆಳೆಸಿಕೊಂಡ ರೈಯವರು ೧೯೭೮ರಲ್ಲಿ ‘ಬೇಟೆಯ ನೆನಪುಗಳು’ ಕೃತಿಯ ಮೂಲಕ ನೆನಪಿನ ಬುತ್ತಿಯನ್ನು ಬಿಚ್ಚಿದರು. ಈ ಕೃತಿ ಪ್ರಕಟವಾಗುವವರೆಗೆ ಹೊಸಗನ್ನಡದಲ್ಲಿ ಮೃಗಯಾ ಸಾಹಿತ್ಯ ಇಲ್ಲವೆನ್ನುವಷ್ಟರ ಮಟ್ಟಿಗೆ ವಿರಳವಾಗಿತ್ತು. ಬೇಟೆಯನ್ನೇ ಪೂರ್ಣವಾಗಿ ವಸ್ತುವಾಗಿ ಸ್ವೀಕರಿಸಿಕೊಂಡು ಬರೆದ ಕೃತಿ ಬೇರೊಂದು ಇರಲಿಲ್ಲ. ಇಂಗ್ಲಿಶಿನಿಂದ ಅನುವಾದಗೊಂಡು ಬಂದ ಮೂರು ನಾಲ್ಕು ಕೃತಿಗಳು ಮತ್ತು ಬಿಡಿ ಲೇಖನಗಳು ಅಲ್ಲಲ್ಲಿ ಪ್ರಕಟವಾಗಿದ್ದವು.