ಚೆನ್ನವೀರ ಕಣವಿಯವರ ಕಾಲ ನಿಲ್ಲುವುದಿಲ್ಲ ಕವಿತೆಯ ತಾತ್ವಿಕ ಅವಲೋಕನ.

Authors

  • KAVERI BHOLA

Abstract

ಕಾಲ ಅತ್ಯಮೂಲ್ಯವಾದದ್ದು. ಕಾಲವನ್ನು ಯಾವುದೇ ಕಾರಣಕ್ಕೂ ಮರಳಿ ಪಡೆಯಲಾಗುವುದಿಲ್ಲ. ಭವಿಷ್ಯದಲ್ಲಿ ಬರಲಿರುವ ಕಾಲವನ್ನು ಇಂದೇ ಅನುಭವಿಸುವುದು ಕಷ್ಟ ಸಾಧ್ಯ. ವರ್ತಮಾನದಲ್ಲಿ ಬದುಕು ಮಾತ್ರ ನಮ್ಮದು. ನಮ್ಮ ಜೀವನದ ಪ್ರತಿಯೊಂದರಲ್ಲೂ ಹಾಸು ಹೊಕ್ಕಾಗಿರುವ ಈ ಕಾಲದ ಸದ್ಬಳಕೆ ಮಾಡಿಕೊಳ್ಳದೇ ಹೋದರೆ ಪಶ್ಚಾತಾಪದ ನಿಟ್ಟುಸಿರು ಕಟ್ಟಿಟ್ಟ ಬುತ್ತಿ. ಹಾಗೆಂದು ಕಳೆದ ಕಾಲವನ್ನು ಮರಳಿ ಪಡೆಯಲು ಯಾವುದೇ ಮಾರ್ಗವಿಲ್ಲ. ಜಗತ್ತಿನ ಅತೀ ಶ್ರೀಮಂತ ವ್ಯಕ್ತಿಯಿಂದಲೂ ಸಾಧ್ಯವಿಲ್ಲ. ಹಾಗೆಂದ ಮಾತ್ರಕ್ಕೆ ಕಾಲ ದುಬಾರಿಯೇನಲ್ಲ. ವರ್ತಮಾನದ ಕಾಲ ಯಾರಿಗೂ ತಾರತಮ್ಯ ಮಾಡದೇ ೨೪ ತಾಸು ಎಲ್ಲರಿಗೂ ನೀಡುತ್ತದೆ. ಆದರೆ ಅದು ಯಾರಿಗಾಗಿಯೂ ನಿಲ್ಲುವುದಿಲ್ಲ ಅಥವಾ ಅದು ಯಾರಿಗಾಗಿಯೂ ಮುಂದೆ ಓಡುವುದಿಲ್ಲ ಬಹಳ ವಿಚಿತ್ರವಾದುದು ಈ ಸಮಯದ ವ್ಯವಹಾರ.

Downloads

Published

19.07.2023

How to Cite

KAVERI BHOLA. (2023). ಚೆನ್ನವೀರ ಕಣವಿಯವರ ಕಾಲ ನಿಲ್ಲುವುದಿಲ್ಲ ಕವಿತೆಯ ತಾತ್ವಿಕ ಅವಲೋಕನ. AKSHARASURYA, 2(08), 133–138. Retrieved from http://aksharasurya.com/index.php/latest/article/view/200