ತುಳು ಜನಪದ ಶಿಶುಪ್ರಾಸಗಳು ಒಂದು ಅಧ್ಯಯನ
Abstract
ತುಳುವಿನಲ್ಲಿ ಮಕ್ಕಳ ಸಾಹಿತ್ಯ ರಚನೆಗೆ ವಿಪುಲ ಅವಕಾಶವಿದೆ. ಕಾರಣ ತುಳು ಭಾಷೆಗಿರುವ ಮೌಖಿಕ ಮತ್ತು ಪ್ರಾದೇಶಿಕ ವ್ಯಾಪ್ತಿ ಬಹು ದೊಡ್ಡದು. ಕರಾವಳಿ ಕರ್ನಾಟಕದಲ್ಲಿ ಬಹುಭಾಷಾ ಮತ್ತು ಬಹುಧರ್ಮ ಸಂಸ್ಕೃತಿಗಳ ಜೊತೆ ಹಾಸುಹೊಕ್ಕಾಗಿ ಸಾಗಿ ಬಂದಿದೆ. ಮುಸ್ಲಿಂ, ಕ್ರೈಸ್ತ ಮೊದಲಾದ ಅನ್ಯಧರ್ಮಗಳ ಬದುಕು, ಭಾಷೆಗಳ ಪ್ರಭಾವ ತುಳುವಿನ ಮೇಲೆ ಸಾಕಷ್ಟು ಆಗಿವೆ. ಆಟದ ಪದ್ಯಗಳಲ್ಲಿ ಸೇರಿರುವ ಪರಂಪರಾಗತ ನಂಬಿಕೆಗಳು ನಮ್ಮ ಸಂಸ್ಕೃತಿಯ ಸ್ವರೂಪವನ್ನು ತಿಳಿಯಲು ಮತ್ತು ಮಕ್ಕಳ ಮನಸ್ಸಿನ ಕುತೂಹಲಕಾರಿ ಅಧ್ಯಯನಕ್ಕೆ ಮುಖ್ಯ ಸಾಮಾಗ್ರಿ ಎನಿಸಿದೆ.