ಆಧುನಿಕತೆಯ ಅವಾಂತರಗಳಿಗೆ ಪರಿಹಾರ: ಕಂಬಾರರ ‘ಬೋಳೇಶಂಕರ.
Abstract
ನಗರೀಕರಣದಿಂದ ನಾಡಿನ ಮೂಲ ಸಂಸ್ಕೃತಿಯು ತನ್ನ ನೆಲೆಯನ್ನು ಕಳೆದುಕೊಳ್ಳುತ್ತಿದ್ದು, ಗ್ರಾಮೀಣ ಬದುಕು ಅಸ್ಥಿರವಾಗುತ್ತಿದೆ. ಶ್ರಮಜೀವನಕ್ಕೆ ಬೆಲೆಯೇ ಇಲ್ಲದಂತಾಗಿದ್ದು, ದುರಾಸೆಯ, ದೌರ್ಜನ್ಯದ, ಸ್ವಾರ್ಥಿಗಳ ತಾಣಗಳಾಗಿ ಆಧುನಿಕ ನಗರಗಳು ಮೈದಾಳುತ್ತಿವೆ. ಅಧಿಕಾರಕ್ಕಾಗಿ ಹಾತೊರೆಯುತ್ತ ಭೋಗಗಳ ಬದುಕಿನ ಆಕರ್ಷಣೆಗಳಿಗೆ ಒಳಗಾಗಿರುವ ಇಂದಿನ ಜನತೆಯು ಪರಂಪರೆ, ಮೌಲ್ಯಗಳನ್ನು ಕಡೆಗಣಿಸುತ್ತಿದೆ. ಇಂತಹ ಸಂದರ್ಭದಲ್ಲಿ ಅಧಿಕಾರ ವಿಮುಖತೆ, ಶ್ಮಜೀವನ, ಸರಳ ಬದುಕನ್ನೇ ಮೌಲ್ಯವಾಗಿಸಿ, ‘ಹಸಿರೇ ಉಸಿರು’ ಎಂಬುದನ್ನು ತಿಳಿಸುವುದು ಚಂದ್ರಶೇಖರ ಕಂಬಾರರ ‘ಬೆಪ್ತಕ್ಕಡಿ ಬೋಳೇಶಂಕರ’ ನಾಟಕದ ಪ್ರಮುಖ ಆಶಯವಾಗಿದೆ.