ಅಂಬಿಕಾತನಯದತ್ತ ಅವರ ‘ನಾನು ಬಡವಿ’ ಕವನದಲ್ಲಿ ಒಲವಿನ ಶ್ರೀಮಂತಿಕೆ.

Authors

  • HEMAVATHI S. R.

Abstract

ಕವಿ, ದಾರ್ಶನಿಕ ಬೇಂದ್ರೆ ಈ ಯುಗದ ಒಬ್ಬ ಮಹಾಕವಿ. ಕವಿಗಳಿಗೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ. ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡ ಕವನಗಳನ್ನು ರಚಿಸಿದ ಕೀರ್ತಿ ಅವರದು. ನಾಡಿನ ತುಂಬೆಲ್ಲಾ ನಡೆದಾಡಿದ, ಅವರಲ್ಲಿರುವಂತ ಪ್ರತಿಯೊಂದು ಸಾಹಿತ್ಯದ ನುಡಿಗಳು ಮಾನವನ ನಾಡಿ ಮಿಡಿತದಂತೆ ಹರಿದಾಡಿ ಇಡೀ ಕನ್ನಡ ಸಾಹಿತ್ಯ ರಂಗವನ್ನೇ ಶ್ರೀಮಂತಗೊಳಿಸಿವೆ ಎಂದರೆ ತಪ್ಪಾಗಲಾರದು. ಇಡೀ ಜೀವನದ ತುಂಬಾ ನಿಸ್ವಾರ್ಥ ಸೇವೆಯನ್ನು ಗೈದ ‘ಧಾರವಾಡದ ಅಜ್ಜ’. ಕನ್ನಡ ಸಾರಸ್ವತ ಲೋಕದ ಮಹಾಕವಿ ಅಂಬಿಕಾತನಯದತ್ತ ರಾಮಚಂದ್ರ ಬೇಂದ್ರೆ ನವೋದಯ ಕಾಲದ ಅತ್ಯಂತ ಪ್ರಸಿದ್ಧ ಕನ್ನಡ ಕವಿಗಳಲ್ಲಿ ಒಬ್ಬರು. ವರಕವಿ, ಅಕ್ಷರಶಃ ‘ಪ್ರತಿಭಾನ್ವಿತ ಕವಿ’ ಎಂದು ಹೊಗಳಲ್ಪಟ್ಟ ಅವರು ಕನ್ನಡಕ್ಕಾಗಿ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಎಂಟು ಜನರಲ್ಲಿ ಎರಡನೆಯ ವ್ಯಕ್ತಿಯಾಗಿದ್ದಾರೆ. ಇಂತಹ ಪ್ರತಿಭಾವಂತ ದ.ರಾ. ಬೇಂದ್ರೆ ಅವರ ಕವನಗಳು ಕನ್ನಡ ಜನತೆಯನ್ನು ಮುಗ್ಧಗೊಳಿಸಿದೆ. ಗಾಯಕರು ಹಾಡಿ ತಣಿದಿದ್ದಾರೆ. ಜನತೆ ಪದೇ ಪದೇ ಕೇಳಿ ಆನಂದಿಸುತ್ತಿದೆ.

Downloads

Published

19.07.2023

How to Cite

HEMAVATHI S. R. (2023). ಅಂಬಿಕಾತನಯದತ್ತ ಅವರ ‘ನಾನು ಬಡವಿ’ ಕವನದಲ್ಲಿ ಒಲವಿನ ಶ್ರೀಮಂತಿಕೆ. AKSHARASURYA, 2(08), 110–114. Retrieved from http://aksharasurya.com/index.php/latest/article/view/196