ಅಯಾಸ್, ಅಶ್ವತ್ಥಾಮನ್ ಮತ್ತು ಆಗ್ರಹ’ ನಾಟಕಗಳ ತೌಲನಿಕ ವಿಶ್ಲೇಷಣೆ.

Authors

  • MURALI K.V.

Abstract

ಶ್ರೀ ಅವರ ಅಶ್ವತ್ಥಾಮನ್ ನಾಟಕವು ಪ್ರಕಟಗೊಂಡಿದ್ದು ೧೯೨೯ರಲ್ಲಿ. ಗ್ರೀಕ್‌ನ ‘ಅಯಾಸ್’ ನಾಟಕದಲ್ಲಿನ ಕಥಾವಸ್ತುವನ್ನು ಆಕಾರವಾಗಿಸಿಕೊಂಡು ಶ್ರೀಯವರು ಮಹಾಭಾರತದ ಸೌಪ್ತಿಕ ಪರ್ವದ ಕಥೆಯೊಂದಿಗೆ ಹೊಂದಿಕೆ ಮಾಡಿದರು.    ಅಂದು ಈ ಪ್ರಯೋಗ ಹೊಸ ಬಗೆಯಾದರೂ, ಕೆಲವು ಮಂದಿಯಿಂದ ಪ್ರಶಂಸೆ ದೊರೆಯಿತು. ಕೆಲವು ಮಂದಿ ಚಿರಂಜೀವಿ ಅಶ್ವತ್ಥಾಮನನ್ನು ಆತ್ಮಹತ್ಯೆ ಎಂಬ ಮಹಾಪಾಪಕ್ಕೆ ಇಳಿಸಿಬಿಟ್ಟಿದ್ದಾರೆ ಎಂಬ ಕೂಗು ಕೇಳಿಬಂತು. ನಮ್ಮ ಸಂಸ್ಕೃತಿಯ ಪುರಾಣದ ವಸ್ತುವನ್ನು ಗ್ರೀಕ್ ಸಾಹಿತ್ಯದ ದುರಂತಕ್ಕೆ ಹೊಂದಿಸಿಕೊಂಡಿದ್ದಕ್ಕೆ ಹೇಳಿದ ಊಹಾಪೋಹಗಳನ್ನು ಗಮನಿಸಿದ ವಿ.ಸೀ. ಅವರು ೧೯೩೧ರಲ್ಲಿ ‘ಆಗ್ರಹ’ ಎಂಬ ನಾಟಕವನ್ನು ಬರೆದರು. ಆಗ್ರಹ ನಾಟಕದಲ್ಲಿ ಮಹಾಭಾರತದ ಕಥೆಯನ್ನೇ ಇಲ್ಲಿ ನಾಟಕದ ಸಾಲುಗಳಾಗಿ ಪರಿವರ್ತಿಸಿರುವುದನ್ನು ಕಾಣಬಹುದು. ಮೂಲ ಕೃತಿಯ ಭಾವೋನ್ನತಿಗೆ ಹಾನಿಬಾರದಂತೆ ಅಲ್ಲಿಯ ಪಾತ್ರಗಳ ಘನತೆ ಕುಂದದಂತೆ, ನೋಡಿಕೊಂಡು ಹೊಸ ದೃಷ್ಟಿಗೆ ಅನುಸಾರವಾಗಿ ಮೂಲ ವಸ್ತು ಪಾತ್ರಗಳನ್ನು ಬೆಳೆಸುವ ಮಾರ್ಪಡಿಸುವ ಸ್ವಾತಂತ್ರ್ಯ ವಹಿಸುವುದೇ ಪುರಾಣ ಪ್ರಜ್ಞೆಯ ಪುನರುತ್ಥಾನಕ್ಕೆ ಅಪೇಕ್ಷಣೀಯವಾದ ವಿಧಾನವೆಂಬ ನಿಲುವಿಗೆ ಮುಟ್ಟಬಹುದು.

Downloads

Published

19.07.2023

How to Cite

MURALI K.V. (2023). ಅಯಾಸ್, ಅಶ್ವತ್ಥಾಮನ್ ಮತ್ತು ಆಗ್ರಹ’ ನಾಟಕಗಳ ತೌಲನಿಕ ವಿಶ್ಲೇಷಣೆ. AKSHARASURYA, 2(08), 104–109. Retrieved from http://aksharasurya.com/index.php/latest/article/view/195