ವಿಮೋಚನಾಪೂರ್ವ ಹೈದರಾಬಾದ್ ಕರ್ನಾಟಕ: ಕನ್ನಡ ಭಾಷೆ ಮತ್ತು ಶಿಕ್ಷಣದ ಅವಲೋಕನ.
Abstract
ಹೈದರಾಬಾದ ಪ್ರಾಂತ್ಯದ ಕನ್ನಡ ಸ್ಥಿತಿಗತಿ ಕುರಿತು ವಿಚಾರ ಮಾಡುವಾಗ, ಎರಡು ಅಂಶಗಳನ್ನು ಮುಖ್ಯವಾಗಿ ಗಮನಿಸಬೇಕಾಗುತ್ತದೆ. ಒಂದು, ಹಿಂದೆ ೧೯೪೮ಕ್ಕೆ ಮೊದಲು ಈ ಪ್ರಾಂತ ಅಥವಾ ಸಂಸ್ಥಾನದಲ್ಲಿ ವಾಸವಾಗಿದ್ದ ಬಹುಭಾಷಿಕ ಜನಸಮುದಾಯ ಮತ್ತು ಅದರ ತೆಲಂಗಾಣ ಮತ್ತು ಮರಾಠವಾಡವನ್ನೊಳಗೊಂಡ ಎರಡು ಪ್ರದೇಶಗಳಲ್ಲಿ ಹಂಚಿ ಹೋಗಿದ್ದ ಅಥವಾ ಚೆದುರಿದ್ದ ಕನ್ನಡ ಭಾಷಿಕರ ಪ್ರದೇಶಗಳು. ಎರಡು, ಇಂಥ ಕಾರಣಗಳಿಂದ ಮೂಡಿಬಂದ ಈ ಪ್ರಾಂತದ ಒಂದು ವಿಶಿಷ್ಟ ಬಹುಮುಖಿ ಸಂಕೀರ್ಣ ಸಂಸ್ಕೃತಿ, ಹಾಗೆ ಒಳಹೊಕ್ಕು ನೋಡಿದರೆ ಕನ್ನಡಿಗರು ತಮ್ಮ ಸಾವಿರಾರು ವರ್ಷಗಳಿಂದ ಹರಿದುಬಂದ ಭಾಷೆ, ಸಾಹಿತ್ಯ, ಸಂಸ್ಕೃತಿಗಳು ಏನಿದ್ದರು ಮೇಲೆ ಸೂಚಿಸಿದ ಎರಡು ಭಾಷಿಕ ಪ್ರದೇಶಗಳ ಸಂಸ್ಕೃತಿಗಳ ನೆರಳಿನಲ್ಲಿಯೇ ಅರಳಿಸಿ ಬೆಳೆಸಿಕೊಂಡು ಬಂದದ್ದು ಒಂದು ಅಚ್ಚರಿಯ ಸಂಗತಿಯಾಗಿಯೇ ಕಾಣುತ್ತದೆ.