ಕಲ್ಯಾಣ ಕರ್ನಾಟಕ ಸ್ವಾತಂತ್ರ್ಯ ಹೋರಾಟದ ಮಹಿಳಾಮಣಿಗಳು.
Abstract
ಭಾರತದ ಸ್ವಾತಂತ್ರ್ಯ ಹೋರಾಟದ ಕಥನವು ವೈವಿಧ್ಯಮಯ ನೆಲೆಯನ್ನು ಹೊಂದಿದೆ. ಒಂದೊಂದು ಪ್ರದೇಶದ ಹೋರಾಟದ ಕಥನವೂ ರೋಚಕವಾಗಿದೆ. ದುರುಳ ಆಂಗ್ಲರ ಹಾಗೂ ಅವರೊಂದಿಗೆ ಕೈಜೋಡಿಸಿದ ಕೆಲವು ಸ್ಥಳೀಯ ಅರಸರುಗಳ ವಿರುದ್ಧ ನಡೆದ ಸ್ವಾಭಿಮಾನಿ ಹೋರಾಟಗಳು ಮೈನವಿರೇಳಿಸುತ್ತವೆ. ಅದರಲ್ಲೂ ಭಾರತದ ಸ್ವಾತಂತ್ರ್ಯದ ನಂತರ ಸರಿ ಸುಮಾರು ಒಂದು ವರ್ಷದ ನಂತರ ಸ್ವಾತಂತ್ರ್ಯ ಪಡೆದ ಹೈದರಾಬಾದ್ ಕರ್ನಾಟಕ ಈಗಿನ ಕಲ್ಯಾಣ ಕರ್ನಾಟಕದಲ್ಲಿ ಪರಕೀಯ ಆಡಳಿತದ ಮುಕ್ತಿಗಾಗಿ ನಡೆದ ಚಳವಳಿಯು ಇನ್ನೂ ಭಿನ್ನ ಸ್ವರೂಪದಲ್ಲಿತ್ತು. ಹನ್ನೆರಡನೆಯ ಶತಮಾನದ ಶಿವಶರಣರಿಂದ ಸ್ವಾಭಿಮಾನಿ ಚಳವಳಿಯ ಪ್ರೇರಣೆ ಪಡೆದ ಈ ಭಾಗದ ಸ್ವಾತಂತ್ರ್ಯ ಹೋರಾಟದಲ್ಲಿ ಕೇವಲ ಪುರುಷರು ಮಾತ್ರವಲ್ಲದೆ, ಮಹಿಳೆಯರೂ ವಿಶಿಷ್ಟ ಕೊಡುಗೆಯನ್ನು ನೀಡಿದ್ದಾರೆ. ಅಂತಹ ಮಹಿಳಾಮಣಿಗಳ ರೋಚಕ ಹೋರಾಟದ ಕಥನವನ್ನು ವಿಶ್ಲೇಷಿಸುವುದು ಈ ಲೇಖನದ ಉದ್ದೇಶವಾಗಿದೆ.