ಮಳವಳ್ಳಿಯ ಪ್ರದೇಶದ ಭಾಷಾ ವೈಶಿ ಷ್ಟ್ಯಯತೆ
Abstract
ಮಳವಳ್ಳಿ ಕನ್ನಡವು ಭಾಷೆಯ ಬೇರೆ ಬೇರೆ ಆಯಾಮಗಳಲ್ಲಿ ತನ್ನದೇ ಆದ ವೈಶಿಷ್ಟಯತೆಯನ್ನು ಉಳಿಸಿಕೊಂಡಿರುವುದನ್ನು ಕಾಣಬಹುದು. ಇಲ್ಲಿಯ ಪದ ರಚನೆಯನ್ನು ಗಮನಿಸಿದಾಗ ಬಹಳ ಸಮೃದ್ಧವಾದ ಮತ್ತು ವಿಶಿಷ್ಟವಾದ ಪದ ಬಳಕೆಯನ್ನು ಹೊಂದಿದೆ. ಇಲ್ಲಿ ಬಳಕೆಗೊಳ್ಳುವ ಪದಗಳ ಅರ್ಥ ನಿಘಂಟಿನ ಅರ್ಥಕ್ಕಿಂತ ಭಿನ್ನವಾದುದು. ಉದಾಹರಣೆಗೆ, ಸಿಂತೆ-ತಂಟೆ, ವರ್ತ್ನೆ-ಕಾಯಂ, ವಾಕಾಗಿ-ಎಲ್ಲಾ, ಯಳ್ಳಾಗಿ-ಹೆಚ್ಚು, ಸೌಳು-ಗಳಿಗೆ, ಸಣ್‌ಮಾಡಕೋ-ನಮಸ್ಕಾರ, ಗಡ್ಸ-ತೂಕ, ಜಂಬ್ರ-ಕೆಲಸ, ವಲಂಚ್ನೆ-ಭೇದ ಇತ್ಯಾದಿ ಪದಗಳನ್ನು ಕಾಣಬಹುದು.
ಮಳವಳ್ಳಿ ಕನ್ನಡವು ಭಾಷೆ ವಿವಿಧ ರಚನೆಗಳ ಬಳಕೆಯಲ್ಲಿ ತನ್ನದೇ ಆದ ವೈಶಿಷ್ಟ್ಯಯತೆಯನ್ನು ಹೊಂದಿದೆ. ಇಂದಿಗೂ ಆ ವೈಶಿಷ್ಟ್ಯಯತೆಯನ್ನು ಇಲ್ಲಿ ಜನ ಬಳಕೆಯ ನುಡಿಯಲ್ಲಿ ಕಾಣಬಹುದು.