ಶರಣ ಮಾದಾರ ಧೂಳಯ್ಯನ ಕಾಯಕದ ಪರಿಕಲ್ಪನೆ.

Authors

  • H. A. BHOGALE

Abstract

ಶರಣರ ಕಾಯಕ ಕ್ರಾಂತಿ ಭಾರತೀಯ ಇತಿಹಾಸದಲ್ಲಿ ಹಾಗೂ ಹನ್ನೆರಡನೆಯ ಶತಮಾನದಲ್ಲಿ ಒಂದು ಹೊಸ ಅಧ್ಯಾಯ. ಸಕಲ ಜೀವಾತ್ಮರಿಗೆ ಲೇಸನೆ ಬಯಸುತ್ತ ಜನರ ಮನೆ, ಮನಗಳನ್ನು ಯಾವುದೇ ಮತವರ್ಗ ಭೇದವಿಲ್ಲದೆ ಒಂದಾಗಿ ಬೆಸೆದ ಸಾರ್ವತ್ರಿಕ ಬೆಳಕು ಹಚ್ಚಿದ ವಿಶೇಷ ಘಟ್ಟ. ಬಸವಣ್ಣನವರು ಜನಿಸಿದಾಗ ಸಮಾಜದಲ್ಲಿ ಸಾಮಾಜಿಕ ಪರಿಸ್ಥಿತಿ ಅತ್ಯಂತ ಅಸಹನೀಯವಾಗಿತ್ತು. ವೈದಿಕ ಸಂಪ್ರದಾಯದ ಹೆಸರಿನಲ್ಲಿ ಶಾಸ್ತ್ರ ಕಟ್ಟು ಕಟ್ಟಳೆಗಳ ವಿಧಿಯಲ್ಲಿ ಬಂಧಿತವಾಗಿದ್ದ ಅಂದಿನ ಸಮಾಜ ಕೇವಲ ಪಟ್ಟಭದ್ರ ಹಿತಗಳ ಭೋಗ ಭೂಮಿಯಾಗಿತ್ತು. ದೀನದಲಿತರಿಗೆ ಯಾವ ಧಾರ್ಮಿಕ ಹಕ್ಕುಗಳಿಲ್ಲದೆ ಅಂದಿನ ಸಮಾಜದಲ್ಲಿ ಮಾನ್ಯತೆಯೂ ಇರಲಿಲ್ಲ. ಇಂತಹ ದುಸ್ಥಿತಿಯಲ್ಲಿ ಬಸವಣ್ಣನವರು ಕ್ರಾಂತಿಯ ಹೊಸ ಕಹಳೆಯನ್ನು ಮೊಳಗಿಸಿ ರಾಜಕೀಯ, ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ನೈತಿಕ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಹೊಸ ವಿಚಾರಧಾರೆ ಹರಿಯುವಂತೆ ಮಾಡಿದರು. ತಮ್ಮ ಗಹನವಾದ ಆಲೋಚನೆಗಳಿಂದ ವೈದಿಕ ಸಂಪ್ರದಾಯ ಪ್ರತಿಪಾದಿಸಿದ್ದ ಜನನ ಆಧಾರಿತ ವೃತ್ತಿ ಸಂಬಂಧಿ ಸಿದ್ಧಾಂತವನ್ನು ತೊಡೆದು ಹಾಕಲು ವೃತ್ತಿ ಸ್ವಾತಂತ್ರ್ಯವನ್ನು ಮತ್ತು ಶ್ರಮದ ಪವಿತ್ರತೆಯನ್ನು ಬೋಧಿಸಿದರು.

Downloads

Published

19.07.2023

How to Cite

H. A. BHOGALE. (2023). ಶರಣ ಮಾದಾರ ಧೂಳಯ್ಯನ ಕಾಯಕದ ಪರಿಕಲ್ಪನೆ. AKSHARASURYA, 2(08), 51–55. Retrieved from http://aksharasurya.com/index.php/latest/article/view/187