ವಚನ ಪರಿಕಲ್ಪನೆ ಮತ್ತು ಸ್ವರೂಪ.
Abstract
ಹನ್ನೆರಡನೆಯ ಶತಮಾನದಲ್ಲಿ ಶಿವಶರಣರು ತಮ್ಮ ಅನುಭವಗಳನ್ನು ಅನುಭಾವಗಳನ್ನಾಗಿಸಿ, ಸ್ವಸ್ಥ ಸಮಾಜ ರಚನೆ, ಮಾನವ ಬದುಕಿನ ಪರಿ ಮತ್ತು ಪೂರಕ ವಿಷಯಗಳನ್ನು ಪ್ರತಿಪಾದಿಸುವ ಮೂಲಕ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ಅಥವಾ ಭಾರತ ದೇಶಕ್ಕೆ ಮಾತ್ರವಲ್ಲ; ಇಡೀ ಜಗತ್ತಿಗೇ ಹೊಸ ಸಂದೇಶವನ್ನು ನೀಡಿದರು. ಆ ಮೂಲಕ ವಿಶ್ವಮಾನವತೆಯನ್ನು ಪ್ರಚುರಪಡಿಸಿದರು. ಅವರ ಮಾಡಿದ ಕಾರ್ಯ ಆ ಕಾಲದಲ್ಲಿ ಸಾಮಾಜಿಕ ಸಂಚಲನೆಗೆ ಕಾರಣವಾಗಿತ್ತು. ಇಂದಿಗೂ ಅವರ ತತ್ವಗಳ ಅನುಷ್ಠಾನವಾದಲ್ಲಿ ಬಹುದಿನಗಳ ಸಮಾನತೆಯ ಕನಸು ನನಸಾಗಬಲ್ಲದು. ಸಮಾನತೆಯ ಸಾಕಾರಕ್ಕೆ ಶರಣರ ವಚನಗಳ ಅರಿಯುವಿಕೆ ಮತ್ತು ಅರಿತುಕೊಂಡಿದ್ದನ್ನು ಅನುಸರಿಸುವ ಮನೋಭಾವ ಬೆಳೆದು ಬಂದರೆ ಸಾಕು ಮನುಷ್ಯನ ಬದುಕು ಸುಂದರವಾಗುತ್ತದೆ.