ಹಳಗನ್ನಡ ಕಾವ್ಯಗಳಲ್ಲಿ ಮಾನವೀಯ ಸಂಬಂಧಗಳು.
Abstract
ವಿಶ್ವವು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಭಯೋತ್ಪಾದನೆ, ಹಿಂಸಾಚಾರದಂತಹ, ಮಾನವ ಹಕ್ಕು ಉಲ್ಲಂಘನೆಗಳ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅಣ್ವಸ್ತ್ರಗಳು ಜೀವ ಭಯವನ್ನುಂಟು ಮಾಡುತ್ತಿವೆ. ಯುದ್ಧ ಜೀವನಾಶಕದ ಸಂಕೇತ. ಘೋರ ಪರಿಣಾಮವನ್ನು ಜಗತ್ತಿನ ಅಧಿಕಾರ ದಾಹಿಗಳು ಅರಿಯಬೇಕಿದೆ. ಪ್ರಭುತ್ವ ಕಾಲ ಕಾಲಕ್ಕೆ ಯುದ್ಧಗಳನ್ನು ಸಲಹುತ್ತ ಬಂದಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಮ್ಮ ಹಿರಿಯ ತಲೆಮಾರಿನ ಹಳ್ಗನ್ನಡ ಕಾವ್ಯ ಧೋರಣೆಗಳಲ್ಲಿ ಕಂಡು ಬರುವ ದಯೆ, ಸ್ವಾಮಿಭಕ್ತಿ, ಅನುಕಂಪ, ಸಹಾನುಭೂತಿ, ತ್ಯಾಗ, ಸದ್ಭಾವನೆಗಳು ಮಾನವೀಯತೆಯನ್ನು ಬಲಪಡಿಸುವಂತವುಗಳು. ಇಂತಹ ಉತ್ಕೃಷ್ಟ ಅಂಶಗಳು ಪ್ರಾಚೀನ ಕವಿ ಪುಂಗವರಾದ ಕವಿರಾಜಮಾರ್ಗದ ಶ್ರೀವಿಜಯ, ಆದಿಪುರಾಣದ ಪಂಪ, ಗದಾಯುದ್ಧದ ರನ್ನ, ರಾಮಚಂದ್ರ ಚರಿತ ಪುರಾಣದ ನಾಗಚಂದ್ರ ಮುಂತಾದ ಅನೇಕ ಕವಿವರ್ಯರು ತಮ್ಮ ಕಾವ್ಯಗಳಲ್ಲಿ ಅತ್ಯಂತ ಮೌಲ್ಯಯುಕ್ತವಾದ ಮಾನವೀಯತೆಯ ಅಂಶಗಳನ್ನು ಪ್ರಶಂಸಿಸಿರುವ ಅವರ ಮನೋಧರ್ಮ ಮೆಚ್ಚತಕ್ಕದ್ದಾಗಿದೆ.