ಸ್ಥಳನಾಮಗಳ ಅಧ್ಯಯನ.
Abstract
ಅಪರಿಚಿತ ವ್ಯಕ್ತಿಯೋರ್ವ ಭೇಟಿಯಾದಾಗ ಸಾಮಾನ್ಯವಾಗಿ ಕೇಳುವ ಮೊದಲ ಪ್ರಶ್ನೆ ನೀವು ಯಾವ ಊರಿನವರು? ನಿಮ್ಮ ಹೆಸರೇನು? ಎಂದು. ಆಗ ಆತ ಊರಿನ ಹೆಸರು ಹೇಳಿದಾಗ ಆ ಊರಿನ ಒಂದು ಚಿತ್ರಣವೇ ತೋರಿದಂತಾಗುತ್ತದೆ. ಅಂದರೆ ಮನುಷ್ಯ ಸ್ಥಳದೊಂದಿಗೆ ಅಷ್ಟೊಂದು ಬೆರತುಕೊಂಡಿದ್ದಾನೆ ಎಂದು ಹೇಳಬಹುದು, ನೈಸರ್ಗಿಕ ಕ್ರಿಯೆಯ ಜೊತೆಗೆ ಅವರ ಒಡನಾಟ ಸ್ಥಳನಾಮ ಬೆಳವಣಿಗೆಯ ಪ್ರಕ್ರಿಯೆಗೆ ನಾಂದಿಯಾಗಿರಬೇಕು.
ಅಲೆಮಾರಿ ಜೀವನದಿಂದ ಪ್ರಾರಂಭವಾದ ಮಾನವರ ಬದುಕು ಕ್ರಮೇಣ ಒಂದೆಡೆ ನೆಲೆ ಪಡೆದುಕೊಂಡಿತು. ಮೊದಮೊದಲು ಒಂದು ಗುಂಪಿನ ಮಾದರಿಯಲ್ಲಿ ಇವರು ವಾಸವಾಗಿದ್ದರು. ಇದನ್ನು ಗ್ರಾಮಕಲ್ಪನೆಯ ಪೂರ್ವ ಸ್ಥಿತಿ ಎಂದು ಹೇಳಬಹುದು. ಕಾಲ ಕ್ರಮೇಣ ಆಯಾ ಭೌಗೋಳಿಕ ಪರಿಸರದಲ್ಲಿ ವಾಸಿಸುವ ಗುಂಪುಗಳ ನೆಲೆಗಳು ಪ್ರಾರಂಭವಾದವು. ವ್ಯಕ್ತಿಯಿಂದ ವ್ಯಕ್ತಿಯನ್ನು ಪ್ರತ್ಯೇಕಿಸಲು ಹೆಸರಿಡುವುದು ಅನಿವಾರ್ಯವಾಯಿತು, ತದನಂತರ ಇದು ಸಂಪ್ರದಾಯವಾಯಿತು ಹೀಗೆ ತನ್ನ ಕುಟುಂಬಕ್ಕೂ ತಾನು ನೆಲೆ ನಿಂತ ಊರಿಗೂ ಗುರುತಿಸುವ ಪ್ರಕ್ರಿಯೆ ಆರಂಭವಾಯಿತು.