ಆಧುನಿಕ ಯುಗದ ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಅಭಿವ್ಯಕ್ತಿಯ ಮೊದಲ ಕೂಗು

Authors

  • ವೇದಾವತಿ ಎಸ್.

Abstract

ಇಪ್ಪತ್ತನೇ ಶತಮಾನದ ಆರಂಭ ಎಂದರೆ ಆಧುನಿಕ ಯುಗದ ಪ್ರಾರಂಭ ಘಟ್ಟವೆಂದೇ ಹೇಳಬಹುದು. ಈ ಯುಗ ಮಹಿಳಾ ಸಾಹಿತ್ಯದಲ್ಲಿ ಹೊಸ ಕ್ರಾಂತಿಯುಂಟಾದ ಕಾಲವಾಗಿದೆ. ರಾಷ್ಟ್ರೀಯ ಚಳುವಳಿ, ಪಾಶ್ಚಾತ್ಯ ಸಂಪರ್ಕ, ಹೊಸ ಶಿಕ್ಷಣ ಮತ್ತು ಸಾಮಾಜಿಕ ಚಿಂತನೆಗಳ ಪರಿಣಾಮದಿಂದ ಸಮಾಜದಲ್ಲಿ ಸುಧಾರಣಾ ಮನೋಭಾವ ಕಾಣಿಸಿಕೊಂಡಿತು. ಪರಂಪರಾಗತ ಪುರುಷ ನಿರ್ಮಿತ ಸಮಾಜದಲ್ಲಿ ಮಹಿಳೆ ಬೆಳೆದು ಬಂದರೂ ಆತ್ಮವಿಶ್ವಾಸದಿಂದ ತಮ್ಮ ಅನುಭವಗಳನ್ನು ಅಭಿವ್ಯಕ್ತಿಸ ತೊಡಗಿದ ಕವಯತ್ರಿಯರು ಉದಯವಾದ ಕಾಲ. ಶೈಕ್ಷಣಿಕವಾದ ಪ್ರಗತಿಯೇ ಈ ಬದಲಾವಣೆಗೆ ಪ್ರಧಾನವಾದ ಕಾರಣ. ಈ ಅವಧಿಯಲ್ಲಿ ಕಥನ ಸಾಹಿತ್ಯ ಮಹಿಳೆಯರನ್ನು ಆಕರ್ಷಿಸಿದಷ್ಟು ಕಾವ್ಯ ಆಕರ್ಷಿಸಿರಲಿಲ್ಲ. ತಮ್ಮ ಭಾವನೆಗಳನ್ನು ನೇರವಾಗಿ ಹೇಳುವುದಕ್ಕಿಂತಲೂ ಪಾತ್ರಗಳ ಮೂಲಕ, ಸನ್ನಿವೇಶಗಳ ಮೂಲಕ ದೀರ್ಘವಾಗಿ ನಿರೂಪಿಸುವುದನ್ನು ಬಯಸಿದ್ದರಿಂದಲೇ ಮಹಿಳೆಯರು ಕಾವ್ಯಕ್ಕಿಂತ ಕಥನಸಾಹಿತ್ಯಕ್ಕೆ ಆಕರ್ಷಿತರಾಗಿದ್ದರು. ಇಪ್ಪತ್ತನೆಯ ಶತಮಾನದ ಕೊನೆಯ ಭಾಗದಲ್ಲಿ ಕವಯತ್ರಿಯರಿಗೆ ದೊರೆತ ಮುಕ್ತ ಅವಕಾಶ ಕಾವ್ಯದಲ್ಲಿ ತನ್ನತನವನ್ನು ಅನಾವರಣಗೊಳಿಸಲು ಅವಕಾಶ ಕಲ್ಪಿಸಿತು. ಆದರೆ ಕಾವ್ಯ ಬರೆದವರ ಸಂಖ್ಯೆ ಕಡಿಮೆ. ವಾಚ್ಯಾರ್ಥ ಪ್ರಧಾನವಾಗಿರುವ ಕೆಲವೇ ಕಾವ್ಯಗಳಲ್ಲಿ ದಟ್ಟ ನೀತಿ, ಉಪದೇಶಗಳು ಸಾಮಾಜಿಕ ಪರಿವರ್ತನೆಯ ಭಾಗವಾಗಿ ಕಾಣಿಸಿಕೊಂಡಿರುವುದನ್ನು ನಿರ್ದಿಷ್ಟ ಕವಯತ್ರಿಯರ ಪ್ರಾತಿನಿಧಿಕ ಕವಿತೆಗಳಲ್ಲಿ ಗುರುತಿಸಬಹುದು.

Downloads

Published

05.12.2022

How to Cite

ವೇದಾವತಿ ಎಸ್. (2022). ಆಧುನಿಕ ಯುಗದ ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಅಭಿವ್ಯಕ್ತಿಯ ಮೊದಲ ಕೂಗು. AKSHARASURYA, 1(03), 01 to 08. Retrieved from http://aksharasurya.com/index.php/latest/article/view/18

Issue

Section

Article