ಭಾರತದ ಪ್ರಜಾಪ್ರಭುತ್ವ: ಸವಾಲು ಮತ್ತು ಸಮಸ್ಯೆಗಳು.

Authors

  • NAGARAJ GU. HAVINAL

Abstract

ಭಾರತವು ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿದೆ. ಭಾರತಕ್ಕೆ ಸಂವಿಧಾನ ರಚನಾ ಸಭೆ ರಚನೆಗೊಂಡ ನಂತರ ಸಭೆಯಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಆಳವಾದ ಚರ್ಚೆ ಮತ್ತು ಅಭಿಪ್ರಾಯಗಳು ವ್ಯಕ್ತವಾದವು. ಸಂಸದೀಯ ವ್ಯವಸ್ಥೆ, ಅಧ್ಯಕ್ಷಿಯ ವ್ಯವಸ್ಥೆ, ಏಕಾತ್ಮಕ ಪದ್ದತಿ, ಮುಂತಾದ ಮಾದರಿ ಸರಕಾರಗಳ ಬಗ್ಗೆ ಚರ್ಚಾತ್ಮಕ ಸಭೆಗಳು ನಡೆದು ಸಂಸದೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಯಿತು. ಭಾರತ ಸಂವಿಧಾನದಲ್ಲಿನ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಅಂಬೇಡ್ಕರ್‌ರವರು ವಿವರಿಸುತ್ತಾ ಇದು ಕೇವಲ ರಾಜಕೀಯವಾಗಿ ಸಮಾನ ವಯಸ್ಕ ಮತ ಚಲಾವಣೆಯ ಅಧಿಕಾರ ನೀಡಿರುವ ವ್ಯವಸ್ಥೆ ಮಾತ್ರವಲ್ಲ, ಇದು ರಾಷ್ಟ್ರದಲ್ಲಿನ ಪ್ರತಿಯೊಬ್ಬ ಪ್ರಜೆಯ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಹಿತಾಸಕ್ತಿಗಳನ್ನು ಅಭಿವೃದ್ಧಿಗೊಳಿಸಲು ಪೂರಕವಾದ ಸ್ವಾತಂತ್ರö್ಯ, ಸಮಾನತೆ ಹಾಗೂ ಸಹೋದರತೆಗಳನ್ನು ಒಳಗೊಂಡಿದ್ದು ಅವುಗಳನ್ನು ಯತಾವತ್ತಾಗಿ ಜಾರಿಗೊಳಿಸುವುದೇ ಆಗಿದೆ ಎಂದಿದ್ದಾರೆ. ಸಂವಿಧಾನದ ನಿರ್ಮಾತೃಗಳು ಸುಂದರವಾದ ಪ್ರಜಾಪ್ರಭುತ್ವವನ್ನೇ ನಮ್ಮ ದೇಶಕ್ಕೆ ಅಳವಡಿಸಿದರೂ ಕೂಡ ಹಲವು ಕಾರಣಗಳಿಗಾಗಿ ಪ್ರಜಾಪ್ರಭುತ್ವವು ಅನೇಕ ಸವಾಲು ಮತ್ತು ಸಮಸ್ಯೆಗಳನ್ನು ಎದುರಿಸುತ್ತಿದೆ.

Downloads

Published

05.07.2023

How to Cite

NAGARAJ GU. HAVINAL. (2023). ಭಾರತದ ಪ್ರಜಾಪ್ರಭುತ್ವ: ಸವಾಲು ಮತ್ತು ಸಮಸ್ಯೆಗಳು. AKSHARASURYA, 2(07), 120–124. Retrieved from http://aksharasurya.com/index.php/latest/article/view/174

Issue

Section

Article