ಟಿ. ಪಿ. ಕೈಲಾಸಂ ಅವರ ನಾಟಕಗಳಲ್ಲಿ ಸ್ತ್ರೀ ಸಂಬಂಧೀ ವಸ್ತು ಧೋರಣೆಗಳು.

Authors

  • VINODRAJ C. C.

Abstract

ನಾಟಕದ ವಸ್ತುವಿಗೆ ಸಂಬಂಧಿಸಿದಂತೆ ಜಗತ್ತಿನ ಎಲ್ಲಾ ದೇಶಗಳ ರಂಗಭೂಮಿಯ ಇತಿಹಾಸವು ಪುರಾಣ ವಸ್ತುವಿನಿಂದ ಆರಂಭಗೊಂಡು ಸಾಮಾಜಿಕ ವಸ್ತುವಿನ ಕಡೆಗೆ ನಡೆದು ವ್ಯವಸ್ಥಿತ ಬೆಳವಣಿಗೆ ಹೊಂದಿರುವುದು ಸ್ಪಷ್ಟವಿದೆ. ಕನ್ನಡ ರಂಗಭೂಮಿಯ ಇತಿಹಾಸದ ಸಂದರ್ಭದಲ್ಲಿಯೂ ಪೌರಾಣಿಕ ವಸ್ತು ಸ್ಥಿತಿ, ಜೀವನ ಶ್ರದ್ಧೆಗಳನ್ನು ಜಾನಪದ ರಂಗಭೂಮಿಯ ಕಾಲದಿಂದಲೇ ಗುರುತಿಸಬಹುದು. ನಮ್ಮ ಅಭಿಜಾತ ಪರಂಪರೆಯ ಮೊದಲ ನಾಟಕಕಾರರು ಸಂಸ್ಕೃತ ನಾಟಕ ಪರಂಪರೆಯನ್ನು ಅನುಕರಿಸಿದ್ದರಿಂದ ಸಹಜವಾಗಿಯೇ ಅವರೂ ಸಂಸ್ಕೃತ ನಾಟಕದ ಮೂಲ ದ್ರವ್ಯವಾದ ಪುರಾಣವನ್ನೇ ಅವಲಂಬಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದಲ್ಲಿ ಭಾರತವು ವೈಜ್ಞಾನಿಕವಾಗಿ ಪ್ರಾಶ್ಚಾತ್ಯ ಪ್ರಭಾವಕ್ಕೆ ತನ್ನನ್ನು ತೆರೆದುಕೊಂಡಿತು. ಶಿಕ್ಷಣದೊಟ್ಟಿಗೆ ಜನರಲ್ಲಿ ಹೊಸ ಚಿಕಿತ್ಸಕ ದೃಷ್ಟಿ ಹುಟ್ಟಿಕೊಂಡಿತು. ಇದರ ಪರಿಣಾಮವಾಗಿ ಅನೇಕ ಶತಮಾನಗಳಿಂದ ಪರಂಪರಾಗತವಾಗಿ ಬಂದು ಸ್ಥಾಯಿಯಾಗಿ ಉಳಿದ ಪ್ರಶ್ನಾತೀತವಾದ ಸನಾತನ ಸ್ತ್ರಿ ಮೌಲ್ಯಗಳನ್ನು ನಿಷ್ಕರ್ಷಕ್ಕೆ ಒಡ್ಡಲಾಯಿತು. ಸತೀಪದ್ಧತಿ, ಬಾಲ್ಯವಿವಾಹ, ವಿಧವಾ ಕೇಶಮುಂಡನ, ಬಹುಪತ್ನಿತ್ವ ಮುಂತಾದ ಅಮಾನವೀಯ ಆಚರಣೆಗಳು ಉದಾರವಾದಿಗಳ ಗಮನ ಸೆಳೆದವು. ಈ ಸಮಸ್ಯೆಗಳು ಸಾಹಿತ್ಯದಲ್ಲಿ ಚರ್ಚಿತವಾದವು. ಅದರಲ್ಲಿಯೂ ಕನ್ನಡದ ಸ್ವತಂತ್ರ ನಾಟಕಗಳು ಸ್ತ್ರಿ ಸಂಬಂಧೀ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡೇ ರಚಿತಗೊಂಡದ್ದು ವಿಶೇಷವೆನ್ನಬಹುದು.

Downloads

Published

05.07.2023

How to Cite

VINODRAJ C. C. (2023). ಟಿ. ಪಿ. ಕೈಲಾಸಂ ಅವರ ನಾಟಕಗಳಲ್ಲಿ ಸ್ತ್ರೀ ಸಂಬಂಧೀ ವಸ್ತು ಧೋರಣೆಗಳು. AKSHARASURYA, 2(07), 114–119. Retrieved from http://aksharasurya.com/index.php/latest/article/view/173

Issue

Section

Article