ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಎಮೋಜಿಗಳ (EMOJI) ಭಾಷಿಕ ನೆಲೆ.
Abstract
ಮಾನವರು ಪರಸ್ಪರ ಸಂಪರ್ಕ ಸಾಧನೆಗೆ ಮಾತು ರೂಢಿಸಿಕೊಂಡರು. ಇದು ಮೊದಮೊದಲು ಮೌಖಿಕ ಧ್ವನಿ ಸಂಕೇತಗಳಿದಿಂದ ನೆರವೇರುತಿತ್ತು. ಕಾಲಾಂತರದಲ್ಲಿ ಇದಕ್ಕೊಂದು ಬರೆಹ ರೂಪದ ಅವಶ್ಯಕತೆ ಬಂದಾಗ ಅನೇಕ ಸಂಕೇತಗಳನ್ನು ರೂಪಿಸಿಕೊಂಡಿದ್ದು ಕಂಡು ಬಂದಿದೆ. ಇಂತಹ ಸಂಕೇತಗಳು ಅಯಾ ಕಾಲಘಟ್ಟದ ಜನ ಬದುಕಿನಲ್ಲಿ ಬಳಕೆಯಲ್ಲಿದ್ದ ಮಾತಿನ ಬಗೆಯನ್ನು ಪ್ರತಿನಿಧಿಸುತ್ತವೆ. ಈ ಸಂಕೇತಗಳಲ್ಲಿ ಕಾಲಕಾಲಕ್ಕೆ ಮಾಡಿಕೊಂಡ ಬದಲಾವಣೆಗಳು ಅನೇಕ ಮಾತುಗಳಲ್ಲಿ ಲಿಪಿ ಸಂಕೇತಗಳಾಗಿ ರೂಪುಗೊಂಡಿವೆ. ಮಾತಿನಲ್ಲಿ ಲಿಪಿ ಸಂಕೇತಗಳು ಬಳಕೆಗೆ ಬಂದ ಮೇಲೆ ಚಿತ್ರರೂಪದ ಸಂಕೇತಗಳು ಬಳಕೆಯಿಂದ ಹಿನ್ನೆಲೆಗೆ ಸರಿದವು.