ಭೂಪಾಲದ ರಾಣಿ ಕಮಲಾಪತಿ.
Abstract
ಭಾರತದ ಮಧ್ಯಪ್ರದೇಶ ರಾಜ್ಯದ ರಾಜಧಾನಿ ಭೂಪಾಲದಲ್ಲಿ ಇತ್ತೀಚಿಗೆ ಪ್ರಧಾನ ಮಂತ್ರಿಗಳು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಶ್ರೇಣಿಯ ಹೈಟೆಕ್ ರೈಲು ನಿಲ್ದಾಣ ಉದ್ಘಾಟಿಸಿದ ಸಮಾಚಾರ ಕೇವಲ ದೇಶದಲ್ಲಿ ಅಷ್ಟೇ ಅಲ್ಲ ವಿದೇಶದಲ್ಲೂ ಭಾರತೀಯ ರೇಲ್ವೆಯ ಕುರಿತು ಹುಬ್ಬೇರಿಸುವಂತೆ ಮಾಡಿದೆ. ಅದೇ ರೈಲ್ವೇ ಇಲಾಖೆ, ಅದೇ ಸಿಬ್ಬಂದಿ ಆದರೂ ದೂರದೃಷ್ಟಿಯ ನಾಯಕತ್ವದಿಂದಾಗಿ ನಿಗದಿತ ಸಮಯದಲ್ಲಿ ರೈಲ್ವೆ ಹೊಸತೊಂದು ಮಾದರಿ ಪ್ರಸ್ತುತ ಪಡಿಸಿದೆ. ದೇಶದ ಎಲ್ಲ ರೈಲು ನಿಲ್ದಾಣಗಳಿಗಿಂತಲು ವಿಶೇಷ ಎನ್ನಲು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಶ್ರೇಣಿಯ ಹೈಟೆಕ್ ರೈಲು ನಿಲ್ದಾಣ ಎನ್ನುವುದು ಮೊದಲ ಕಾರಣ. ಇಲ್ಲಿಯವರೆಗೆ ಹಬೀಬಗಂಜ ರೈಲು ನಿಲ್ದಾಣವಾಗಿತ್ತು. ಈಗ ರೈಲುನಿಲ್ದಾಣದ ಹೆಸರು ರಾಣಿ ಕಮಲಾಪತಿ ರೈಲು ನಿಲ್ದಾಣ ಎಂದು ಹೆಸರಿಸಲಾಗಿದೆ. ಸ್ಟೇಶನ್‌ನ ಭವ್ಯತೆ ಮಾತ್ರವಲ್ಲ ವನವಾಸಿ ರಾಣಿ ಕಮಲಾಪತಿ ಹೆಸರಿನ ಕಾರಣದಿಂದ ರೈಲುನಿಲ್ದಾಣ ಭಾರತೀಯ ರೈಲಿನ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆಯಬಹುದಾದ ಘಳಿಗೆ ಎನ್ನಬಹುದು. ಮಧ್ಯಪ್ರದೇಶದ ರಾಜ್ಯದ ರಾಜಧಾನಿಯಾದ ಭೂಪಾಲ ನಗರದ ಜನರೂ ಮರೆತಿರಬಹುದಾದ ರಾಣಿ ಕಮಲಾಪತಿ ಹೆಸರು ಇಡಲಾಗಿದೆ. ಯಾರಿವಳು? ರಾಣಿ ಕಮಲಾಪತಿ? ಇತಿಹಾಸದ ಪುಟಗಳಲ್ಲಿ ಮರೆಯಾದ ರಾಣಿ ಕಮಲಾಪತಿ, ಯಾರ ಹೆಸರನ್ನು ಭೂಪಾಲನ ಹಬೀಬಗಂಜ ರೈಲುನಿಲ್ದಾಣಕ್ಕೆ ಇಡಲಾಗಿದೆಯೋ ಅವಳ ಇತಿಹಾಸ ಅರಿಯುವ ಕುತೂಹಲ ಗರಿಗೆದರುತ್ತದೆ. ಆಲ ಜೋಹರ ಒಪ್ಪಿಕೊಂಡು ಜಲಸಮಾಧಿಯಾದವಳು ರಾಣಿ ಕಮಲಾಪತಿ ಎಂಬುದನ್ನು ತಿಳಿದಾಗ ನಮ್ಮ ಮೈ ಮನ ಜುಮ್ಮೆನಿಸುತ್ತದೆ.