ಪ್ರೇಮಚಂದರ ಕಥೆಗಳಲ್ಲಿ ಬಡತನ, ಶೋಷಣೆ ಮತ್ತು ಹೆಣ್ಣು.
Abstract
ಇಡೀ ಸಾಮಾಜಿಕ ವ್ಯವಸ್ಥೆಯಲ್ಲಿ ಗ್ರಾಮೀಣ ಜನರ ಬದುಕನ್ನು ಬಹುಮಟ್ಟಿಗೆ ಕಟ್ಟಿಕೊಡುವ ಕಥೆಗಾರರಲ್ಲಿ ಪ್ರೇಮಚಂದರು ಪ್ರಮುಖರು. ಇವರ ಮೊದಲ ಹೆಸರು ‘ಧನಪತ್ ರಾಯ್’. ಪ್ರೀತಿಯಿಂದ ‘ನವಾಬ’ರೆಂದು ಕರೆಯುತ್ತಿದ್ದರು. 1880 ಜುಲೈ 20ರಂದು ಜನಿಸಿದರು. ತಂದೆ ಮುನಿಷಿ ಅಜಾಯಿಬ್ ಲಾಲ್, ತಾಯಿ ಆನಂದಿ ದೇವಿ. ‘ಹಿಂದಿ’ ಹಾಗೂ ‘ಉರ್ದು’ ಎರಡು ಭಾಷೆಗಳಲ್ಲಿ ಸಾಹಿತ್ಯ ರಚನೆ ಮಾಡಿದ್ದಾರೆ. ಮೂಲತಃ ಮಾನವತಾವಾದಿಗಳಾಗಿದ್ದು ಕಥೆಗಳಲ್ಲಿ ಮಾನವೀಯತೆಯನ್ನು, ಬದುಕಿನ ಹಲವು ಸಮಸ್ಯೆಗಳು, ಸಾಂಸಾರಿಕ ಜೀವನ, ರೈತರ ಬದುಕು, ಬಡತನ, ನಿರಕ್ಷರತೆ, ಮನೆಯ ಸ್ಥಾನಮಾನಗಳು, ಸಾಮಾಜದ ಚಿತ್ರಣ, ಸ್ತ್ರಿಯರ ಸ್ಥಾನಮಾನ, ಅಸ್ಪೃಶ್ಯತೆಯಂತಹ ಹಲವಾರು ಮುಖಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗಿರುತ್ತದೆ ಎಂಬುದನ್ನು ಅವರ ಕಥೆಗಳಲ್ಲಿ ಕಾಣಬಹುದು.