ದೇವರ ದಾಸಿಮಯ್ಯನ ವಚನಗಳಲ್ಲಿ ಸಾಮಾಜಿಕ ಪ್ರಜ್ಞೆ.
Abstract
ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ದವಾಗಿರುವ ದೇವರ ದಾಸಿಮಯ್ಯ ದಾರ್ಶನಿಕ ಸಮಾಜ ಸುಧಾರಕ. ಶುಚಿ ಬದುಕಿನ ಹಿತಚಿಂತಕ, ಸದಾಚಾರ ಪ್ರೇರಕ, ವಚನ ರಚನೆಯ ಆದ್ಯ ಪ್ರವರ್ತಕ, ಮಿಗಿಲಾದ ಮಾನವ ಪ್ರೇಮಿ, ಉದಾತ್ತ ಜೀವಿ. ಹೀಗಾಗಿ ಇವರ ಬದುಕು ಬರಹ ಹಿಂದಿನಂತೆ ಈಗಲೂ ಪ್ರಸ್ತುತ. ಈ ಮಹನೀಯನ ಬಗೆಗೆ ಚಿಂತನೆ ಮರು ಚಿಂತನೆಗಳಿಗೆ ಸದಾ ಅವಕಾಶ ಇದೆ. ದಾಸಿಮಯ್ಯನನ್ನು ಕುರಿತಂತೆ ಸಂಶೋಧಕರ ಸಹೃದಯ ಆಲೋಚನೆಗೆ ಅಂತ್ಯ ಕಾಣಲಿಲ್ಲ. ದಾಸಿಮಯ್ಯನ ಕಾಲ ಹೆಸರು, ಉಲ್ಲೇಖಿತ ಪವಾಡ, ಪ್ರೇರಣೆ ಮೊದಲಾದವುಗಳ ಬಗೆಗೆ ಇನ್ನು ಅಗೆತ ನಿಂತಿಲ್ಲ. ವ್ಯಕ್ತಿಯ ಬದುಕು ದೊಡ್ಡದಾದ ಅವನ ಸರ್ವಸ್ವವೂ ಮಹತ್ವದ ಅಂಶಗಳಾಗುತ್ತವೆ. ಇದಕ್ಕೆ ದೇವರ ದಾಸಿಮಯ್ಯ ಹೊರತಾಗಿಲ್ಲ.