ಕನ್ನಡ ಛಂದೋ ಗ್ರಂಥಗಳು.
Abstract
ಶ್ರೀವಿಜಯನ ‘ಕವಿರಾಜಮಾರ್ಗ’ ಮುಖ್ಯವಾಗಿ ಒಂದು ಅಲಂಕಾರಶಾಸ್ತ್ರ ಗ್ರಂಥವಾದರೂ, ಅದರಲ್ಲಿ ವ್ಯಾಕರಣ ಮತ್ತು ಛಂದಸ್ಸುಗಳಿಗೆ ಸಂಬಂಧಿಸಿದ ಕೆಲವು ಅಂಶಗಳನ್ನು ಕೂಡ ಪ್ರಸ್ತಾಪಿಸಲಾಗಿದೆ. ಕನ್ನಡ ಸಾಹಿತ್ಯದಲ್ಲಿ ಪ್ರಪ್ರಥಮ ಉಪಲಬ್ಧ ಕೃತಿ ಎಂಬ ಹೆಗ್ಗಳಿಕೆಗೂ ಈ ಕೃತಿ ಪಾತ್ರವಾಗಿದೆ. ಈ ಕೃತಿಯಲ್ಲಿ ಅಲಂಕಾರಶಾಸ್ತ್ರ. ಛಂದಸ್ಸು, ಕವಿ ಕಾವ್ಯ ಸ್ವರೂಪ ಹಾಗೂ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದ ವಿಷಯಗಳು ಉಲ್ಲೇಖಿತವಾಗಿದೆ. ಕನ್ನಡ ಛಂದೋಗ್ರಂಥಗಳ ಚರಿತ್ರೆಯನ್ನು ಅವಲೋಕಿಸ ಹೊರಟರೆ ಮೊದಲು ದೊರೆಯುವ ಕೃತಿ ಕವಿರಾಜಮಾರ್ಗ.