ಪಾವಗಡ ತಾಲ್ಲೂಕಿನ ವೀರನಾಯಕರನ್ನು ಕುರಿತ ಆಚರಣೆಗಳು: ಒಂದು ನೋಟ.
Abstract
ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕು ಐತಿಹಾಸಿಕ ಪ್ರಸಿದ್ಧತೆಯನ್ನು ಪಡೆದ ಪರಮ ಪಾವನ ಸ್ಥಳವಾಗಿದೆ. ಜಾನಪದೀಯ ಸಂಪತ್ತಿನಿಂದಲೂ ತನ್ನ ಮೈಗೂಡಿಸಿಕೊಂಡಿದೆ. ಈ ತಾಲ್ಲೂಕಿನಲ್ಲಿರುವ 144 ಹಳ್ಳಿಗಳಲ್ಲಿಯೂ ಒಂದಲ್ಲಾ ಒಂದು ಕಲ್ಲು ಪೂಜೆಗೆ ಒಳಗಾಗಿ, ದೈವತ್ವಕ್ಕೆ ಸರ್ಪಡೆಗೊಂಡಿರುವುದು ಗಹನವಾದ ವಿಷಯವಾಗಿದೆ. ಇಲ್ಲಿ ಕೆಲವರು ನಾಸ್ಥಿಕರಿದ್ದರೆ, ಹಲವಾರು ಜನ ಆಸ್ಥಿಕರಿದ್ದಾರೆ. ಪ್ರಸ್ತುತ ಈ ಲೇಖನದಲ್ಲಿ ಪಾವಗಡ ತಾಲ್ಲೂಕಿನ ಜಾನಪದ ವೀರನಾಯಕರನ್ನು, ಅವರ ಭಕ್ತರು ಆರಾಧಿಸುವ ವಿಧಾನವನ್ನು ಕುರಿತು ತಿಳಿಸಲಾಗುವುದು.