ಹನ್ನೆರಡನೇಶತಮಾನದ ವಚನಕಾರರ ವಚನಗಳಲ್ಲಿ ಮಾತಿನ ಮಹತ್ವ.

Authors

  • Arunakumari B. N.

Abstract

ಕನ್ನಡ ಸಾಹಿತ್ಯ ಪ್ರಕಾರಗಳಿಗಿಂತ ಹೆಚ್ಚು ಮೌಲ್ಯಯುತ ಭಿನ್ನ ಮತ್ತು ಸರಳ ಅಭಿವ್ಯಕ್ತಿ ಪ್ರಕಾರ ವಚನ ಸಾಹಿತ್ಯ. ಸದಾ ಜೀವನ ಮೌಲ್ಯಪರತೆಯಿಂದ ಕೂಡಿದ ಗಟ್ಟಿ ತಾತ್ವಿಕ ನೆಲೆಯನ್ನು ಹೊಂದಿರುವಂಥದ್ದು. ಮನುಷ್ಯ ಇತರ ಜೀವಿಗಿಂತ ಶ್ರೇಷ್ಠನೆಂದು ಗುರುತಿಸಿಕೊಂಡದ್ದೆ ತಾನಾಡುವ ಮಾತಿನಿಂದ. ‘ಮಾತು ಮಾತು ಮಥಿಸಿ ಬಂತು ನಾದದ ನವನೀತ’ ಎಂಬ ಬೇಂದ್ರೆಯವರ ಮಾತುಗಳು ವಚನಕಾರರಲ್ಲೇ ಸಾಬೀತಗೊಂಡಿದ್ದವು. ಆದ್ದರಿಂದ ಜನಸಾಮಾನ್ಯರನ್ನು ಕೇಂದ್ರೀಕರಿಸಿ ಆಡು ಮಾತಿನಲ್ಲಿ ವಚನ ರಚನೆ ಮಾಡಿದರು. ಅವರ ನಂಬಿಕೆಯೇ ಮಾತುಗಳಾಗಿ, ಆ ಮಾತೇ ಆದರ್ಶಮಯ ಜೀವನಾನುಭವದ ಸಂಕೇತವಾಗಿ ಉಳಿದು ‘ವಚನ’ ಎಂದರ್ಥ ಪಡೆಯಿತು. ಪ್ರತಿಯೊಬ್ಬ ವಚನಕಾರರಲ್ಲೂ ಜೀವನಾನುಭವದ ಅಗಾಧತೆ ಗಟ್ಟಿ ನೆಲೆಯಲ್ಲಿ ಧ್ವನಿಸಿತ್ತು ಎಂಬುದು ಅವರ ವಚನಗಳ ಮೂಲಕ ತಿಳಿಯುತ್ತದೆ.

Downloads

Published

05.06.2023

How to Cite

Arunakumari B. N. (2023). ಹನ್ನೆರಡನೇಶತಮಾನದ ವಚನಕಾರರ ವಚನಗಳಲ್ಲಿ ಮಾತಿನ ಮಹತ್ವ. AKSHARASURYA, 2(06), 156–162. Retrieved from http://aksharasurya.com/index.php/latest/article/view/150

Issue

Section

Article