ಇಳಾಭಾರತಂ-ಮಹಾಭಾರತದ ಮಹಿಳಾ ನೋಟ.
Abstract
ಸಾವಿರ ವರ್ಷಗಳಷ್ಟು ಸಮೃದ್ಧಿಯುಳ್ಳ ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದರೆ ಜೀವನದಂತೆ ಸಾಹಿತ್ಯವು ಚಲನಾಶೀಲವಾಗಿ ಬದಲಾವಣೆಗೊಳ್ಳುತ್ತಾ ಬಂದರೆ ಮಾತ್ರ ತನ್ನ ಜೀವಂತಿಕೆಯನ್ನು ಅದು ಕಾಪಾಡಿಕೊಳ್ಳಬಲ್ಲದೆಂಬುದು ಸ್ಪಷ್ಟವಾಗುತ್ತದೆ. ಭಾಷೆ, ಛಂದಸ್ಸು, ಅಂದಂದಿನ ಕಾವ್ಯದ ಪ್ರಮುಖ ಲಕ್ಷಣಗಳಾಗಿದ್ದವು. ರಾಜಕೀಯ, ಸಾಮಾಜಿಕ ಪರಿಸ್ಥಿತಿಗಳು, ಮತಧರ್ಮಗಳು ಇವೇ ಮೊದಲಾದವು ನಿಧಾನವಾಗಿಯಾದರೂ ಬದಲಾವಣೆ ಪಡೆಯುತ್ತಾ ಬಂದಿವೆ. ತಮ್ಮ ಕಾಲದ ಪ್ರಮುಖ ಮೌಲ್ಯಗಳನ್ನು ಪ್ರತಿಪಾದಿಸುವುದರೊಂದಿಗೆ ಯುಗಶಕ್ತಿಯನ್ನು ತಮ್ಮ ಕಾವ್ಯದಲ್ಲಿ ಹಿಡಿದಿಟ್ಟ ಪಂಪ, ರನ್ನರಂತ ಮಹಾಕವಿಗಳನ್ನೂ ಒಳಗೊಂಡಂತೆ ವಿವಿಧ ಪಂಡಿತರ ಆಸಕ್ತಿ, ಅಭಿಪ್ರಾಯಗಳು ಅಂದಿನ ಕಾವ್ಯರೂಪ ಹಾಗೂ ಧೋರಣೆಯನ್ನು ನಿಯಂತ್ರಿಸಿರುವುದನ್ನು ಕಾಣುತ್ತೇವೆ.