ಸಿದ್ಧಲಿಂಗಯ್ಯನವರ ಕಾವ್ಯಗಳು -ದಲಿತ ಸಮುದಾಯದ ಆತ್ಮಕಥನ.
Abstract
ಒಂದು ದಲಿತ ಆತ್ಮಕಥೆಯ ಸ್ವರೂಪದ ನೆಲೆಗಳಾದ ಬಡತನ, ಅಸ್ಪೃಶ್ಯತೆ, ಶೋಷಣೆ, ಸಾಮಜಿಕ ಬದಲಾವಣೆಯ ಹಂಬಲಗಳು ಮತ್ತು ರಾಜಕೀಯ ಸ್ವಾತಂತ್ರ್ಯದ ಬೇಡಿಕೆ, ಎಲ್ಲವೂ ನೆಲೆಗೊಂಡಿರುವದನ್ನು ನಾವು ಡಾ. ಸಿದ್ದಲಿಂಗಯ್ಯನವರ ಕಾವ್ಯಗಳಲ್ಲಿ ಕಾಣಬಹುದಾಗಿದೆ. ಆ ಕಾರಣದಿಂದಾಗಿ ಸಿದ್ದಲಿಂಗಯ್ಯನವರ ಕಾವ್ಯಗಳು ಒಂದು ಸಮುದಾಯದ ಆತ್ಮಕಥೆಯಾಗಿವೆ. ಮೊಗಳ್ಳಿಯಂತ ಹಿರಿಯ ವಿದ್ವಾಂಸರು “ದಲಿತ ಆತ್ಮಕಥೆಯಾಗುವ ಶಕ್ತಿ ಕೇವಲ ಸಿದ್ದಲಿಂಗಯ್ಯನವರ ಕಾವ್ಯಕ್ಕೆ ಮಾತ್ರ” ಎಂದು ಹೇಳಿರುವದು ಗಮನಾರ್ಹ. ಸಿದ್ದಲಿಂಗಯ್ಯನವರ ಘನತೆಯ ತೂಕ ಇನ್ನೂ ಹೆಚ್ಚಾಗುತ್ತದೆ ಎಂದು ಹೇಳಬಹುದು.