ತುಂಗಭದ್ರಾ ಅಣೆಕಟ್ಟು: ಚಾರಿತ್ರಿಕ ವಿಶ್ಲೇಷಣೆ.
Keywords:
ತುಂಗಭದ್ರಾ, ನದಿ, ಅಣೆಕಟ್ಟು, ಕೂಡಲಿ, ಕ್ಯೂಸೆಕ್ಸ್, ಟಿಎಂಸಿ, ಹಂಚಿಕೆ, ನೀರಾವರಿ, ಕಾಲುವೆ, ಪ್ರಭುತ್ವ, ಪುರಾಣ, ವಸಾಹತುAbstract
ತುಂಗಭದ್ರಾ ಅಣೆಕಟ್ಟು ನಿರ್ಮಾಣಕ್ಕೂ ಮೊದಲು ತುಂಗಭದ್ರಾ ನದಿಗೆ ವಿಜಯನಗರ ಸಾಮ್ರಾಜ್ಯದ ಆಡಳಿತದ ಅವಧಿಯಲ್ಲಿ ನಿರ್ಮಿಸಿದ ಅಣೆಕಟ್ಟುಗಳ ಪರಿಚಯ ಹಾಗೂ ಅವುಗಳ ಕಾರ್ಯಗಳನ್ನು ತಿಳಿಸುವುದು. ನಂತರ ಅವುಗಳ ಸಂರಕ್ಷಣೆ ಮತ್ತು ವಿಫಲತೆಗೆ ಕಾರಣ, ತುಂಗಭದ್ರಾ ಅಣೆಕಟ್ಟು ನಿರ್ಮಾಣಕ್ಕೂ ಪೂರ್ವದಲ್ಲಿ ಜಲಾನಯನ ಪ್ರದೇಶದ ಜೀವಸಂಕುಲಗಳ ಸ್ಥಿತಿ-ಗತಿ ಹಾಗೂ ಜಲಾಶಯದ ನಿರ್ಮಾಣಕ್ಕೆ ಬೆವರು ಸುರಿಸಿದ ಶ್ರಮಜೀವಿಗಳ ಪಾತ್ರ ಕುರಿತು ಸಂಕ್ಷಿಪ್ತವಾಗಿ ವಿಶ್ಲೇ಼ಷಿಸುವ ಪ್ರಯತ್ನ ಮಾಡಲಾಗಿದೆ.