ದೋಪ್ದಿ ಪಾತ್ರದ ಮರು ಸೃಷ್ಟಿ.
Abstract
ಕನ್ನಡದ ಪ್ರಮುಖ ಬರಹಗಾರರಲ್ಲಿ ಡಾ. ಎಚ್. ಎಲ್ ಪುಷ್ಪಾ ರವರು ಒಬ್ಬರು. ಇವರು ಪ್ರಮುಖ ಸ್ತಿçÃವಾದಿ ಚಿಂತಕಿ. ಡಾ. ಎಚ್. ಎಲ್. ಪುಷ್ಪ ರವರು ಹಲವಾರು ಕೃತಿಗಳನ್ನು, ನಾಟಕಗಳನ್ನು ರಚಿಸಿದ್ದು ಕನ್ನಡ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಇವರ ಕೃತಿಗಳಲ್ಲಿ ‘ಅಮೃತಮತಿ ಸ್ವಗತ’ ಕವನ ಸಂಕಲನ ಮುಖ್ಯವಾದುದು. ಇವರ ಮತ್ತೊಂದು ಕವನ ಸಂಕಲನ ‘ಗಾಜುಗೋಳ’. ಇದರಲ್ಲಿ ಬರುವ ಪ್ರಮುಖ ಕವಿತೆ ಎಂದರೆ ದೋಪ್ದಿ ಹಾಗೂ ಹೆಜ್ಜೆಗಳು. ಮಹಾಶ್ವೇತಾ ದೇವಿಯವರ ಸ್ತನ ಕಥೆಗಳಲ್ಲಿ ಬರುವ ದ್ರೌಪದಿಯ ಪಾತ್ರದಿಂದ ಪ್ರೇರಿತರಾಗಿ ಈ ಕವಿತೆಯನ್ನು ರಚಿಸಿದ್ದಾರೆ. ಆಧುನಿಕ ಮಹಿಳಾ ಕವಿಯತ್ರಿಯರು ತಮ್ಮ ಸಾಹಿತ್ಯ ಕೃತಿಗಳಿಗೆ ಪುರಾಣ ಪಾತ್ರಗಳನ್ನೇ ವಸ್ತುಗಳನ್ನಾಗಿ ಹೆಚ್ಚು ಆಯ್ಕೆ ಮಾಡಿಕೊಳ್ಳುತ್ತಾರೆ, ಏಕೆಂದರೆ ಇದರಿಂದ ಸಂಪ್ರದಾಯವಾದಿಗಳು ಪುರಾಣ ಪಾತ್ರಗಳಿಗೆ ತೊಡಸಿದ ಮುಸುಕನ್ನು ತೆರವುಗೊಳಿಸಿ, ಅದರ ವಾಸ್ತವತೆಯನ್ನು ಹೇಳುವ ಮೂಲಕ ಪುರಾಣ ಪಾತ್ರಗಳನ್ನು ಮರುಕಥನೀಕರಣಕ್ಕೆ ಒಳಗು ಮಾಡುತ್ತಾರೆ. ಇಲ್ಲಿ ಪುರಾಣ ಪಾತ್ರಗಳಾದರು ಅವು ವರ್ತಮಾನದ ಪರಿಸ್ಥಿತಿಯನ್ನು ಬಿಂಬಿಸಿರುತ್ತವೆ. ಡಾ. ಎಚ್. ಎಲ್. ಪುಷ್ಪಾ ಅವರು ರಚಿಸಿದ ದೋಪ್ದಿ ಹಾಗೂ ಹೆಜ್ಜೆಗಳು ಇದೆ ಹಿನ್ನೆಲೆಯನ್ನು ಒಳಗೊಂಡಿದೆ.