ಪದವಿ ತರಗತಿಗಳಲ್ಲಿ ಛಂದಸ್ಸಿನ ಬೋಧನಾ ವಿಧಾನಗಳು.
Abstract
ಶಾಸ್ತ್ರಸಾಹಿತ್ಯ ಎಂಬ ಸಮಾಸ ಪದದಲ್ಲಿ ‘ಶಾಸ್ತ್ರ’ ಮತ್ತು ‘ಸಾಹಿತ್ಯ’ ಎಂಬ ಎರಡು ಪದಗಳಿವೆ. ಶಾಸ್ತ್ರ ಸಾಹಿತ್ಯವೆಂದರೆ ಶಾಸ್ತ್ರ ವಿಚಾರಗಳನ್ನು ತಿಳಿಸುವ ಬರವಣಿಗೆ ಅಥವಾ ಗ್ರಂಥಶಾಸ್ತ್ರ ಎಂದು ಸಾಮಾನ್ಯ ಅರ್ಥದಲ್ಲಿ ಹೇಳಬಹುದು. ಕಾವ್ಯ ಲಕ್ಷಣವನ್ನು ವಿವರಿಸುವ ಅನೇಕ ಸಂಸ್ಕೃತ ಗ್ರಂಥಗಳು ಸಾಹಿತ್ಯ ಮೀಮಾಂಸಾ, ಸಾಹಿತ್ಯ ದರ್ಪಣ, ಸಾಹಿತ್ಯ ಸಾರ, ಸಾಹಿತ್ಯ ರತ್ನಾಕರ ಎಂಬ ಹೆಸರುಗಳಿಂದಲೇ ಪ್ರಸಿದ್ದವಾಗಿವೆ. ನಾವು ಬಲ್ಲ ಮಟ್ಟಿಗೆ ಸಂಸ್ಕೃತದ ಶಾಸ್ತ್ರ ಗ್ರಂಥಗಳೆಲ್ಲವೂ ಸಾಧಾರಣವಾಗಿ ಪದ್ಯರೂಪದಲ್ಲಿಯೇ ಇವೆ. ಬಹುಶಃ ಸಂಸ್ಕೃತ ಮಾದರಿಯನ್ನು ಅನುಸರಿಸಿ ಪ್ರಾಚೀನ ಕನ್ನಡ ಗ್ರಂಥಗಳು ಕೂಡ ಪದ್ಯದಲ್ಲಿಯೇ ರಚಿತವಾಗಿವೆ.